ಕುಣಿಗಲ್: ಸಾಮಾಜಿಕ ಜಾಲತಾಣ ‘ಇನ್ಸ್ಟಾಗ್ರಾಂ’ನಲ್ಲಿ ಪರಿಚಯವಾಗಿದ್ದ ಯುವತಿಗೆ ಹುಟ್ಟುಹಬ್ಬದ ಉಡುಗೊರೆ ನೀಡಲು ಆಂಧ್ರಪ್ರದೇಶದಿಂದ ಬಂದ ಸಹೋದರರು ಯುವತಿಯ ಸಮುದಾಯದವರ ಆಕ್ರೋಶಕ್ಕೆ ತುತ್ತಾಗಿದ್ದು, ಪೊಲೀಸರ ಸಕಾಲಿಕ ಪ್ರವೇಶದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ಮುಸ್ಲಿಂ ಯುವತಿಗೆ ಆಂಧ್ರದ ಚಿತ್ತೂರಿನ ಹಿಂದೂ ಯುವಕನೊಂದಿಗೆ ಇನ್ಸ್ಟಗ್ರಾಂನಲ್ಲಿ ಸ್ನೇಹವಾಗಿತ್ತು. ಯುವತಿಗೆ ಉಡುಗೊರೆ ನೀಡಲು ಮಂಗಳವಾರ ಸಹೋದರನ ಜತೆ ಬಂದ ಯುವಕ ಯುವತಿಯನ್ನು ಭೇಟಿ ಮಾಡಿದಾಗ ಮುಸ್ಲಿಂ ಯುವಕರ ಗುಂಪು ತೀವ್ರ ವಿಚಾರಣೆ ನಡೆಸಿ ಹಲ್ಲೆಗೆ ಮುಂದಾಗಿದ್ದರು.

ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಯುವಕರ ಗುಂಪನ್ನು ಚದುರಿಸಿ ಇಬ್ಬರನ್ನು ರಕ್ಷಿಸಿದ್ದಾರೆ.

ಯುವತಿ ಕಡೆಯವರು ದೂರು ನೀಡಲು ನಿರಾಕರಿಸಿದ ಕಾರಣ ಸಹೋದರರಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.