ಬುಧವಾರ, ಆಗಸ್ಟ್ 5, 2020
26 °C

ಟೊಮೆಟೊ, ಕೆಂಪು ಮೆಣಸಿಗೆ ವಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ 2020-21ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತು ಪಾವತಿಸುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ.ರಘು ತಿಳಿಸಿದ್ದಾರೆ.

ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿಯಲ್ಲಿ ಟೊಮೆಟೊ, ಚಿಕ್ಕನಾಯಕನಹಳ್ಳಿಯ ಹಂದನಕೆರೆ ಹೋಬಳಿಯಲ್ಲಿ ಕೆಂಪು ಮೆಣಸಿನಕಾಯಿ, ಹುಳಿಯಾರು ಹೋಬಳಿಯಲ್ಲಿ ಈರುಳ್ಳಿ, ಕೆಂಪು ಮೆಣಸಿನಕಾಯಿ, ಟೊಮೆಟೊ, ತಿಪಟೂರಿನ ನೊಣವಿನಕೆರೆ ಕೆಂಪು ಮೆಣಸಿನಕಾಯಿ, ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿಯಲ್ಲಿ ಟೊಮೆಟೊ, ತುರುವೇಕೆರೆಯ ದಬ್ಬೇಘಟ್ಟ ಟೊಮೆಟೊ, ಪಾವಗಡದ ಕಸಬಾ ಕೆಂಪು ಮೆಣಸಿನಕಾಯಿ, ಮಧುಗಿರಿಯ ಐ.ಡಿ.ಹಳ್ಳಿ ಕೆಂಪು ಮೆಣಸಿನಕಾಯಿ, ಕೊಡಿಗೇನಹಳ್ಳಿ ಹೋಬಳಿಯಲ್ಲಿ ಕೆಂಪು ಮೆಣಸಿನಕಾಯಿ, ಪುರವರ ಹೋಬಳಿ ಕೆಂಪು ಮೆಣಸಿನಕಾಯಿ, ಶಿರಾದ ಗೌಡಗೆರೆ ಈರುಳ್ಳಿ, ಬುಕ್ಕಾಪಟ್ಟಣ, ಹುಲಿಕುಂಟೆ ಈರುಳ್ಳಿ ಬೆಳೆಗೆ ವಿಮೆ ಮಾಡಿಸಬಹುದು.

ರೈತರು ಟೊಮೆಟೊಗೆ ₹ 5,900 ವಿಮಾ ಕಂತು ಪಾವತಿಸಬೇಕು. ಪಾವತಿಗೆ ಜು.31 ಕೊನೆ ದಿನ. ಕೆಂಪು ಮೆಣಸಿನಕಾಯಿಗೆ ₹ 3,600 ಪಾವತಿಸಬೇಕಿದ್ದು, ಜು.15 ಕೊನೆ ದಿನ. ಕೆಂಪು ಮೆಣಸಿನಕಾಯಿಗೆ ವಿಮೆ ಮೊತ್ತ ₹ 4,800 ಅನ್ನು ಜು.15ರ ಒಳಗೆ ಪಾವತಿಸಬೇಕು.

ನೀರಾವರಿ ಆಶ್ರಿತ ಈರುಳ್ಳಿಗೆ ₹ 3,750, ಮಳೆ ಆಶ್ರಿತ ಈರುಳ್ಳಿಗೆ ₹ 3,500 ಅನ್ನು ಜು. 31 ಕೊನೆ ದಿನ. ರೈತರು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕು ಅಧಿಕಾರಿಗಳನ್ನು ಸಂಪರ್ಕಿಸಬಹುದು.

ತಾಲ್ಲೂಕು; ದೂರವಾಣಿ

ತುಮಕೂರು; 9945792725
ಗುಬ್ಬಿ; 9686056705
ಚಿಕ್ಕನಾಯಕನಹಳ್ಳಿ; 9538272964
ಕುಣಿಗಲ್; 9448660766
ತಿಪಟೂರು; 9964791910
ತುರುವೇಕೆರೆ; 9448416334
ಕೊರಟಗೆರೆ; 9535781963
ಮಧುಗಿರಿ; 9448448970
ಶಿರಾ; 9945735297
ಪಾವಗಡ; 9844042356

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು