ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಅಂತರರಾಜ್ಯ ಕಾರು ಕಳ್ಳನ ಬಂಧನ

Last Updated 7 ಅಕ್ಟೋಬರ್ 2021, 8:07 IST
ಅಕ್ಷರ ಗಾತ್ರ

ತುಮಕೂರು: ಅಂತರರಾಜ್ಯ ಕಾರು ಕಳ್ಳ ಹಾಗೂ ಕದ್ದ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ₹50 ಲಕ್ಷ ಬೆಲೆ ಬಾಳುವ 7 ಕಾರುಗಳು, ₹2.50 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಪತ್ರಕರ್ತನ ಸೋಗಿನಲ್ಲಿ ಕಾರು ಕಳವು ಮಾಡುತ್ತಿದ್ದ ತಮಿಳುನಾಡಿನ ಮಧುರೈ ನಗರದ ಪರಮೇಶ್ವರನ್ (40) ಹಾಗೂ ಕಳವು ಮಾಡಿದ ಕಾರುಗಳನ್ನುಖರೀದಿಸಿ ಮಾರಾಟ ಮಾಡುತ್ತಿದ್ದ ಕೊಯಮತ್ತೂರಿನ ರೌಡಿಶೀಟರ್ ಹಕೀಂಬಾಷಾ (45) ಬಂಧಿತ ಆರೋಪಿಗಳು.

ತುಮಕೂರು, ಬೆಂಗಳೂರು ಹಾಗೂ ಗೋವಾ, ತಮಿಳುನಾಡಿನಲ್ಲೂ ಕಾರು ಕಳವು ಮಾಡುತ್ತಿದ್ದರು. ಪತ್ರಕರ್ತನ ಗುರುತಿನ ಚೀಟಿಯನ್ನು ಪೊಲೀಸರಿಗೆ ತೋರಿಸಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಕಾರಿನ ಮೇಲೂ ‘ಪ್ರೆಸ್’ ಎಂದು ಹಾಕಿಕೊಂಡಿದ್ದರು. ಕಳ್ಳತನಕ್ಕೆ ಬರುವ ಸಮಯದಲ್ಲಿ ಅನುಮಾನ ಬಾರದಿರಲೆಂದು, ಕುಟುಂಬದವರ ಜತೆ ಪ್ರಯಾಣ ಮಾಡಲಾಗುತ್ತಿದೆ ಎಂದು ಪೊಲೀಸರನ್ನು ನಂಬಿಸಲು ಕಾರಿನಲ್ಲಿ ಕಾಲ್‌ಗರ್ಲ್‌ಗಳನ್ನು ಕರೆದುಕೊಂಡು ಬರುತ್ತಿದ್ದರು. ಕಳವು ಮಾಡಿದ ನಂತರ ಅಸಲಿ ನೋಂದಣಿ ಫಲಕ ತೆಗೆದುಹಾಕಿ, ನಕಲಿ ಫಲಕ ಅಳವಡಿಸಿಕೊಂಡು ತಮಿಳುನಾಡಿಗೆ ತೆಗೆದುಕೊಂಡುಹೋಗಿ ಮಾರಾಟ ಮಾಡುತ್ತಿದ್ದರು.

ತಾಲ್ಲೂಕಿನ ಮಂಚಕಲ್ ಕುಪ್ಪೆ, ನಗರದ ಬಡ್ಡಿಹಳ್ಳಿಯಲ್ಲಿ ಕಾರು ಕಳವಿನ ತನಿಖೆ ನಡೆಸಿದ ಸಮಯದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಹೆದ್ದಾರಿ ಟೋಲ್‌ಗಳಲ್ಲಿ ದಾಖಲಾದ ವಿವರ, ಮೊಬೈಲ್ ನೆಟ್‌ವರ್ಕ್ ಇತರೆ ಮಾಹಿತಿಯನ್ನು ಸಂಗ್ರಹಿಸಿ ಪ್ರಕರಣ ಪತ್ತೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಅತ್ಯಾಚಾರ ಆರೋಪಿ ಬಂಧನ: ಪೊಲೀಸ್ ಕಾನ್‌ಸ್ಟೆಬಲ್ ಎಂದು ಹೆದರಿಸಿ ಮಹಿಳೆಯೊಬ್ಬರನ್ನು ಕರೆದೊಯ್ದು ಅತ್ಯಾಚಾರ ಮಾಡಿದ್ದ ಕಾರುಚಾಲಕ ನಾಗಮಂಗಲ ತಾಲ್ಲೂಕು ದೇವಲಾಪುರ ಹೋಬಳಿ ದೊಡ್ಡನಾಗನಹಳ್ಳಿ ಗ್ರಾಮದ ಪ್ರದೀಪ್ (37) ಎಂಬುವರನ್ನು ಅಮೃತೂರು ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ಸಮೀಪದ ಬಿದನಗೆರೆ ಬಳಿ ಮಹಿಳೆಯೊಬ್ಬರನ್ನು ಬೆದರಿಸಿ, ಪ್ರಕರಣವೊಂದರಲ್ಲಿ ಠಾಣೆಗೆ ಬರುವಂತೆ ಬಲವಂತವಾಗಿ ಬೈಕ್‌ನಲ್ಲಿ ಕರೆದೊಯ್ದಿದ್ದಾರೆ. ಯಡಿಯೂರು ಬಳಿಯ ಶ್ರೀನಿವಾಸ ದೇವರ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿ ಮಾಂಗಲ್ಯ ಸರ, ಮೊಬೈಲ್, ಎಟಿಎಂ ಕಾರ್ಡ್, ಹಣವಿದ್ದ ಪರ್ಸ್ ಕಿತ್ತುಕೊಂಡು ಪರಾರಿಯಾಗಿದ್ದರು.

ಪೊಲೀಸರು ಆರೋಪಿಯನ್ನು ಪತ್ತೆಮಾಡಿ ತನಿಖೆ ನಡೆಸಿದ ಸಮಯದಲ್ಲಿ ಅತ್ಯಾಚಾರ ನಡೆಸಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು, ಮೈಸೂರು, ಹೊಳೆನರಸೀಪುರ, ನಾಗಮಂಗಲ, ತಾವರೆಕೆರೆ, ಪಾಂಡವಪುರ ಸೇರಿದಂತೆ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಒಂಟಿ ಮಹಿಳೆಯರನ್ನು ಗುರುತಿಸಿ, ಅವರನ್ನು ಹೆದರಿಸಿ ಹಣ, ಒಡವೆ ಸುಲಿಗೆ ಮಾಡುತ್ತಿದ್ದರು. ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT