ಗುಬ್ಬಿ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಗುಬ್ಬಿಯ ಹೊಸಪೇಟೆ ಬೀದಿ ನಿವಾಸಿ ವಿನಯ್ ಕುಮಾರ್ (30), ಆರ್.ಪ್ರಸಾದ್ (37) ಎಂಬುವರನ್ನು ಗುಬ್ಬಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಇಬ್ಬರು ‘Lucky88’ ಎಂಬ ಆ್ಯಪ್ ಬಳಸಿ ಸಾರ್ವಜನಿಕರಿಂದ ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ ಎಸ್‌ಬಿಐ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದರು. ಸಾರ್ವಜನಿಕರಿಂದ ನೇರವಾಗಿ ಹಣವನ್ನು ಸಹ ಪಡೆದು ಬೆಟ್ಟಿಂಗ್ ನಡೆಸುತ್ತಿದ್ದರು.

ಆರೋಪಿಗಳಿಂದ ಮೂರು ಮೊಬೈಲ್, ಒಂದು ಟಿ.ವಿ, ₹ 23,580 ನಗದು, ಇವರಿಬ್ಬರ ಬ್ಯಾಂಕ್ ಖಾತೆಯಲ್ಲಿದ್ದ ₹ 3,54,576 ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುಬ್ಬಿಯ ಜೆ.ಸಿ.ಸಿದ್ದರಾಜು ಆರೋಪಿಗಳಿಂದ ಹಣ ಪಡೆದು Lucky88 ಆ್ಯಪ್ ಸರಬರಾಜು ಮಾಡಿದ್ದರು. ಸಿದ್ದರಾಜು ತಲೆ ಮರೆಸಿಕೊಂಡಿದ್ದು ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.

ಇನ್‌ಸ್ಪೆಕ್ಟರ್‌ಗಳಾದ ಎಂ.ವಿ.ಶೇಷಾದ್ರಿ, ಜ್ಞಾನಮೂರ್ತಿ, ಸಿಬ್ಬಂದಿಗಳಾದ ಮಲ್ಲೇಶ್, ಅಯ್ಯೂಬ್ ಜಾನ್, ನಾಗರಾಜು, ಶಿವಶಂಕರ್, ಮಂಜುನಾಥ್, ಹರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾಹಿತಿ ಅಥವಾ ದೂರು ಇದ್ದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಸಂಖ್ಯೆ 0816-8871479, 0816-2272451, 0816-2278000ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.