ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ದಾಳಿ: ವಿಚಾರಣೆಗೆ ರವಿಕುಮಾರ್‌ ಹಾಜರ್‌

Last Updated 6 ಫೆಬ್ರುವರಿ 2020, 10:57 IST
ಅಕ್ಷರ ಗಾತ್ರ

ತುಮಕೂರು: ಕಾಂಗ್ರೆಸ್‌ ಮುಖಂಡ ರಾಯಸಂದ್ರ ರವಿಕುಮಾರ್‌ ಅವರ ಮನೆ ಮೇಲೆ ದಾಳಿ ನಡೆಸಿ ಸೋಮವಾರ ತಡರಾತ್ರಿಯವರೆಗೂ ದಾಖಲೆಗಳನ್ನು ಪರಿಶೀಲಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಚೇರಿಗೆ ಮಂಗಳವಾರ ಕರೆಸಿಕೊಂಡು ವಿಚಾರಣೆ ನಡೆಸಿದರು.

ಇಲಾಖೆಯ ಅಧಿಕಾರಿಗಳ ಮುಂದೆ ಬೆಳಿಗ್ಗೆ 11.30ಕ್ಕೆ ಹಾಜರಾದ ರವಿಕುಮಾರ್‌ ಅವರು ಮಧ್ಯಾಹ್ನ 2.30ರ ವರೆಗೆ ವಿಚಾರಣೆ ಎದುರಿಸಿದರು. ಮಧ್ಯಾಹ್ನ ಊಟದ ಬಳಿಕ 3.30ಕ್ಕೆ ಕಚೇರಿಯೊಳಗೆ ಮತ್ತೆ ಹೋದ ರವಿ, ಸಂಜೆಯವರೆಗೂ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ರವಿ ಅವರಿಂದ ಹಣಕಾಸಿನ ವ್ಯವಹಾರದ ಮಾಹಿತಿ ಕಲೆಹಾಕಲಾಯಿತು ಎಂದು ಮೂಲಗಳು ತಿಳಿಸಿವೆ.

ವಿಚಾರಣೆಯಿಂದ ಹೊರಬಂದ ರವಿಕುಮಾರ್‌ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡುತ್ತ, ನನ್ನ ಹಣಕಾಸಿನ ವ್ಯವಹಾರದ ಕುರಿತು ಕೇಳಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಮಾಡಿದ ವೆಚ್ಚದ ಕುರಿತು ವಿಚಾರಿಸಿದರು. ಎಲ್ಲದಕ್ಕೂ ನನ್ನ ಲೆಕ್ಕಪರಿಶೋಧಕರ ಸಹಾಯದಿಂದ ಉತ್ತರ ನೀಡಿದ್ದೇನೆ. ಕರೆದಾಗ ವಿಚಾರಣೆ ಬರುವಂತೆ ಹೇಳಿದ್ದಾರೆ. ಅವರ ವಿಚಾರಣೆಗೆ ನಾನು ಸಂಪೂರ್ಣ ಸಹಕಾರ ನೀಡುತ್ತಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡ ಮುದ್ದಹನುಮೇಗೌಡ ಅವರ ಆಪ್ತರಾಗಿರುವ ರವಿಕುಮಾರ್ ಅವರು ಕ್ಲಾಸ್‌ ಒನ್‌ ಗುತ್ತಿಗೆದಾರರೂ ಆಗಿದ್ದಾರೆ. ರವಿಕುಮಾರ್ ಕಳೆದ ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ(ಶಾಸಕ ಗೌರಿಶಂಕರ್) ಎದುರು ಪರಾಭವಗೊಂಡಿದ್ದರು.

ತುರುವೇಕೆರೆಯ ರಾಯಸಂದ್ರದಲ್ಲಿನ ರವಿಕುಮಾರ್ ಅವರ ಸ್ವಂತ ಮನೆ, ಸಿದ್ಧಗಂಗಾ ಎಕ್ಸ್‌ಟೆನ್ಷನ್‌ನಲ್ಲಿರುವ ಅವರ ಸಹೋದರಿಯ ಮನೆ ಮೇಲೂ ಏಕಕಾಲದಲ್ಲಿ 15 ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿತ್ತು. ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT