ಮಂಗಳವಾರ, ಅಕ್ಟೋಬರ್ 20, 2020
21 °C

‘ಜಯಚಂದ್ರ– ರಾಜಣ್ಣ ಜೋಡೆತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರಾದ ಟಿ.ಬಿ. ಜಯಚಂದ್ರ ಹಾಗೂ ಕೆ.ಎನ್. ರಾಜಣ್ಣ ಜೋಡೆತ್ತುಗಳಿದ್ದಂತೆ ಎಂದು ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷ ಅರ್.ರಾಜೇಂದ್ರ ಹೇಳಿದರು.

ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಹಿಂದೆ ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್.ರಾಜಣ್ಣ ಶಾಸಕರಾಗಿದ್ದಾಗ ಜಿಲ್ಲೆಯಲ್ಲಿ ಶಿರಾ ಮತ್ತು ಮಧುಗಿರಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದವು. ಮಧುಗಿರಿಗೆ ಎತ್ತಿನಹೊಳೆ ಮತ್ತು ಹೇಮಾವತಿ ನೀರು, ಶಿರಾಕ್ಕೆ ಹೇಮಾವತಿ, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯ ನೀರು ತರಲು ಇಬ್ಬರೂ ನಾಯಕರ ಪರಿಶ್ರಮವಿದೆ’ ಎಂದರು.

ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಮಾತನಾಡಿ ‘ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಣ್ಣ ಮತ್ತು ನಾನು ರಾಮ ಲಕ್ಷ್ಮಣರಂತೆ ಇದ್ದೇವೆ. ಅನುದಾನ ತರುವ ವಿಚಾರದಲ್ಲಿ ಇಬ್ಬರು ಕೂಡ ಪೈಪೋಟಿಯಿಂದ ಕೆಲಸ ಮಾಡುತ್ತಿದ್ದೆವು’ ಎಂದರು.

ಕುಂಚಿಟಿಗರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎಸ್.ತ್ಯಾಗರಾಜ್ ಮಾತನಾಡಿ ‘ಜಯಚಂದ್ರ ಸೋತರೂ ಕ್ಷೇತ್ರದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ರೀತಿಗೆ ಮಾರುಹೋಗಿದ್ದೇನೆ’ ಹೇಳಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜಿ.ಎಸ್.ರವಿ, ಜಿ.ಎನ್.ಮೂರ್ತಿ, ಟಿ.ವಿನಯ್, ಗೋಣಿಹಳ್ಳಿ ದೇವರಾಜ್, ಗುಳಿಗೇನಹಳ್ಳಿ ನಾಗರಾಜ್, ಸಚಿನ್, ಹಲುಗುಂಡೇಗೌಡ, ಚಿದಾನಂದ್, ರಾಕೇಶ್ ಬಾಬು,ಎಂ.ಎನ್.ರಾಜು, ಲಕ್ಷ್ಮಿದೇವಮ್ಮ, ಮಾಗೋಡು ಶ್ರೀರಂಗಪ್ಪ, ಧರಣಿ ಕುಮಾರ್, ವಾಜರಹಳ್ಳಿ ರಮೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.