ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆಯಲ್ಲಿ ಜೆಡಿಎಸ್ ಭದ್ರ: ಸುಧಾಕರ್ ಲಾಲ್

Last Updated 12 ಜನವರಿ 2021, 4:01 IST
ಅಕ್ಷರ ಗಾತ್ರ

ಕೊರಟಗೆರೆ:ಜೆಡಿಎಸ್‌ನ ಜನಪರ ಕಾರ್ಯಕ್ರಮ ರಾಜ್ಯದಲ್ಲಿ ಇನ್ನೂ ಜೀವಂತವಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಅತಿ ಹೆಚ್ಚು ಗೆಲುವು ಸಾಧಿಸಿರುವುದು ಕ್ಷೇತ್ರದಲ್ಲಿ ಜೆಡಿಎಸ್‌ ಬಲಿಷ್ಟವಾಗಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರ್ ಲಾಲ್ ತಿಳಿಸಿದರು.

ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರು ಹೋಬಳಿಯ 36 ಗ್ರಾ.ಪಂ ಗಳಲ್ಲಿ ಶೇ 70ರಷ್ಟು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದು ಭವಿಷ್ಯದ ರಾಜಕೀಯದ ಶಕ್ತಿ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಆರ್.ಶಿವರಾಮಯ್ಯ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಜನ ಬೆಂಬಲಿಗರು ಜಯ ಸಾಧಿಸಿರುವುದರಿಂದ ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅನುಕೂಲವಾಗಲಿದೆ. ಅತಿ ಹೆಚ್ಚು ಜನ ಯುವಕರು ಆಯ್ಕೆಯಾಗಿರುವುದು ಬದಲಾವಣೆಗೆ ಸಾಕ್ಷಿ ಎಂದರು.

ಗ್ರಾ.ಪಂಯಲ್ಲಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ 408ಕ್ಕೂ ಅಧಿಕ ಸದಸ್ಯರನ್ನು ಮಾಜಿ ಶಾಸಕ ಸುಧಾಕರ ಲಾಲ್ ಸನ್ಮಾನಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಅಂಜಿನಪ್ಪ, ಎಂಎಲ್ಸಿ ತೀಪ್ಪೆಸ್ವಾಮಿ, ತುಮಕೂರು ಜೆಡಿಎಸ್ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ಲಕ್ಷ್ಮೀಶ್,ಜಿಲ್ಲಾ ಪಂಚಾಯಿತಿ ಸದಸ್ಯೆ ಪ್ರೇಮಾ ಮಹಾಲಿಂಗಪ್ಪ, ಜಿ.ಪಂ.ಸದಸ್ಯ ಲಕ್ಷ್ಮಿನರಸೇಗೌಡ, ತಿಮ್ಮಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯ ಬೋರಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಭಾರತಿ, ಹುಸ್ನಾ ಫಾರಿಯಾ, ಕಾವ್ಯಾ, ಅನಿತಾ, ಪುಟ್ಟನರಸಪ್ಪ, ಲಕ್ಷ್ಮಿನಾರಾಯಣ್, ಮುಖಂಡ ಎಚ್.ಕೆ.ಮಹಾಲಿಂಗಪ್ಪ, ಜೆ.ಎನ್.ನರಸಿಂಹರಾಜು, ಲಕ್ಷ್ಮೀಶ್, ಎಲ್.ವಿ.ಪ್ರಕಾಶ್, ಲೋಕೇಶ್, ವಿ.ಕೆ.ವೀರಕ್ಯಾತರಾಯ, ಕಿಶೋರ್, ಕೋಡ್ಲಹಳ್ಳಿ ವೆಂಕಟೇಶ್, ನಾಗೇಂದ್ರ, ಸಿದ್ದಮಲ್ಲಪ್ಪ, ಸತೀಶ್, ಚೇತನ್, ಕಿಶೋರ್, ಕಾಮರಾಜು, ರಮೇಶ್, ಕಾಂತರಾಜು, ಗೋಪಾಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT