ತುಮಕೂರು: ಸಾಮಾಜಿಕ ವ್ಯವಸ್ಥೆ, ಜಾತಿ ಪ್ರಜ್ಞೆ ಮತ್ತು ಅವಾಂತರಗಳನ್ನು ‘ಕುಂಡದ ಬೇರು’ ಬಹಳ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ. ಜಾತಿ ಪದ್ಧತಿ ಕುರಿತ ನೋವು, ನಿರ್ಲಕ್ಷ್ಯ, ತಳಮಳ ಎಲ್ಲವೂ ಇದರಲ್ಲಿ ಅಡಕವಾಗಿದೆ ಎಂದು ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಮಿಲಿಟರಿ ಪ್ರಕಾಶನ, ಲೇಖಕಿಯರ ಸಂಘ, ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೇಖಕಿ ಎಡೆಯೂರು ಪಲ್ಲವಿ ರಚನೆಯ ‘ಕುಂಡದ ಬೇರು’ ಕಥಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು.

ಕುಟುಂಬದ ಒಳಗಿರುವ ಕ್ರೌರ್ಯ ಕಥೆಗಳಲ್ಲಿದೆ. ಮಹಿಳೆಯರ ಅಭಿವ್ಯಕ್ತ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿರುವುದನ್ನು ಬಹಳ ಸೂಕ್ಷ್ಮವಾಗಿ ಹೇಳಿದ್ದಾರೆ. ಸಾಹಿತ್ಯ ಮತ್ತು ಬರವಣಿಗೆ ಕುರಿತು ಮಹಿಳೆಯರ ಹಂಬಲ ಕಾಣುತ್ತದೆ. ಭಾನು ಮುಷ್ತಾಕ್ ಅವರ ಕಥೆಗೆ ಬೂಕರ್ ಪ್ರಶಸ್ತಿ ದೊರೆತ ನಂತರ ಮಹಿಳೆಯರ ಕಥಾ ಜಗತ್ತು ಮತ್ತಷ್ಟು ವಿಸ್ತಾರವಾಗುತ್ತಿದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕಿ ಗೀತಾ ವಸಂತ, ‘ಕುಂಡದ ಬೇರು’ ಕಥಾ ಸಂಕಲನದಲ್ಲಿ ತಣ್ಣಗಿನ ಕ್ರೌರ್ಯ ಎದುರಿಸುವ ಹೆಣ್ಣು ಲೋಕವಿದೆ. ಆದರೆ, ಇದು ಬರೀ ಹೆಣ್ಣಿನ ಕಥೆಯಲ್ಲ. ಸ್ಥಳೀಯ ಸಾಂಸ್ಕೃತಿಕ ಲೋಕವೂ ಇದೆ. ಬಣ್ಣ, ಭಾಷೆ, ಸ್ಪರ್ಶ, ರೂಪ, ಘಮಲು ಎಲ್ಲವನ್ನು ಒಳಗೊಂಡ ಜಿಲ್ಲೆಯ ಸಾಂಸ್ಕೃತಿಕ ಲೋಕವನ್ನು ಬಹಳ ಗಾಢವಾಗಿ ಚಿತ್ರಿಸುತ್ತದೆ’ ಎಂದು ವಿಶ್ಲೇಷಿಸಿದರು.

ಸಾಂಸ್ಕೃತಿಕವಾಗಿ ರೂಪಿಸಲ್ಪಡುವ ಹೆಣ್ಣಿನ ತಲ್ಲಣ ಇದೆ. ಹೆಣ್ತನದ ಸಂಕಟ, ಚೌಕಟ್ಟು ದಾಟಬೇಕು ಎಂಬ ಹಂಬಲ ಎಲ್ಲವೂ ಕಥೆಗಳ ಕೇಂದ್ರ. ಸೂಕ್ಷ್ಮವಾಗಿ ಬೇರೆ ಬೇರೆ ಆಯಾಮದಿಂದ ಬದುಕು, ಮಾನವೀಯ ಮುಖಗಳನ್ನು ನೋಡುತ್ತದೆ. ಸಂವೇದನಾಶೀಲ ಪುರುಷ ಪಾತ್ರಗಳು ಸಹ ಎದುರುಗೊಳ್ಳುತ್ತವೆ ಎಂದರು.

ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಲೇಖಕಿ ಎಡೆಯೂರು ಪಲ್ಲವಿ, ಕವಯತ್ರಿ ಬಿ.ಆರ್.ಶ್ರುತಿ, ವಿ.ವಿ ಸಂಶೋಧನಾರ್ಥಿ ನವೀನ್ ಪೂಜಾರಳ್ಳಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.