ಕುಣಿಗಲ್: ಹಣ, ವ್ಯವಹಾರ, ಉತ್ಪಾದನೆ, ನಿರ್ವಹಣೆ ಇರುವ ಕಡೆ ವಾಣಿಜ್ಯ ಪದವೀಧರರಿಗೆ ವಿಪುಲ ಅವಕಾಶಗಳು ಲಭ್ಯವಿದೆ. ಉದ್ಯಮಿಯಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಉದ್ಯೋಗಿಯಾಗಲು ವಾಣಿಜ್ಯ ಶಿಕ್ಷಣ ಭದ್ರ ಬುನಾದಿ ಎಂದು ಕೊರಟಗೆರೆ ಸರ್ಕಾರಿ ಕಾಲೇಜಿನ ವಾಣಿಜ್ಯವಿಜ್ಞಾನ ವಿಭಾಗದ ಮುಖ್ಯಸ್ಥ ಎಂ.ಜಿ.ಲಕ್ಷ್ಮೀಪತಯ್ಯ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸಾ ಕೋಶದಿಂದ ನಡೆದ ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿ ಜೀವನದ ಅವಕಾಶಗಳು ಉಪನ್ಯಾಸದಲ್ಲಿ ಅವರು ಮಾತನಾಡಿದರು.

ಜಾಗತೀಕರಣ, ತಂತ್ರಜ್ಞಾನಗಳ ಅನ್ವೇಷಣೆಯ ಫಲವಾಗಿ ವಾಣಿಜ್ಯ ವಿಜ್ಞಾನ ಇಂದು ವಿಶ್ವದಾದ್ಯಂತ ಮನ್ನಣೆ ಗಳಿಸಿದೆ. ವ್ಯವಹಾರ, ವ್ಯಾಪಾರಕ್ಕಾಗಿ ಅನೇಕ ರಾಷ್ಟ್ರಗಳು ಶತೃತ್ವ ಮರೆತು ವಾಣಿಜ್ಯ ಸಂಬಂಧಗಳನ್ನು ಮಾಡಿಕೊಳ್ಳುತ್ತಿವೆ. ವಾಣಿಜ್ಯ ಶಿಕ್ಷಣ ಇಂದು ವೃತ್ತಿಪರ ಪ್ರಾಯೋಗಿಕ ಶಿಕ್ಷಣವಾಗಿದೆ. ಚಾರ್ಟಡ್ ಅಕೌಂಟೆಂಟ್, ಕಂಪನಿ ಕಾರ್ಯದರ್ಶಿ, ವೆಚ್ಚ ಲೆಕ್ಕಶಾಸ್ತ್ರ, ನಿರ್ವಹಣೆ, ಕಾರ್ಪೊರೇಟ್ ಅಕೌಂಟಿಂಗ್, ಹಣಕಾಸು ನಿರ್ವಹಣೆ, ಅಂತರರಾಷ್ಟ್ರೀಯ ವ್ಯಾಪಾರ, ಆದಾಯ ತೆರಿಗೆ, ಜಿಎಸ್ಟಿ , ಹೂಡಿಕೆ, ಆನ್ಲೈನ್ ಮಾರುಕಟ್ಟೆ, ವಹಿವಾಟು ಮತ್ತಿತರ ಕ್ಷೇತ್ರಗಳು ಗುಣಮಟ್ಟದ ಮಾನವ ಸಂಪನ್ಮೂಲ ಬಯಸುತ್ತಿವೆ ಎಂದರು.

ಐಕ್ಯೂಎಸಿ ಸಂಚಾಲಕ ಟಿ.ಎನ್.ನರಸಿಂಹಮೂರ್ತಿ, ವಾಣಿಜ್ಯ ಶಿಕ್ಷಣವು ಸಾಂಪ್ರದಾಯಿಕ ಶಿಕ್ಷಣಕ್ಕಿಂತ ವಿಭಿನ್ನ, ಯುವಜನರ ಆಸಕ್ತಿ ಕೆರಳಿಸುವ ಹಣ ಮತ್ತು ಹಣಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಸುತ್ತದೆ ಎಂದರು.

ಪ್ರಾಂಶುಪಾಲ ರಾಮಾಂಜನಪ್ಪ ಅಧ್ಯಾಪಕ ಕೆ.ಸತೀಶಕುಮಾರ್, ನಾಗಮಣಿ, ಮಂಜುನಾಥ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.