ಕುಣಿಗಲ್: ‘ತಾಲ್ಲೂಕಿನ ಗುತ್ತಿಗೆದಾರರಿಗೆ ವಿವಿಧ ಸರ್ಕಾರಿ ಇಲಾಖೆಗಳಿಂದ ಸುಮಾರು ₹500ಕೋಟಿ ಹಣ ಬಿಡುಗಡೆಯಾಗಬೇಕಿದೆ. ಬಿಲ್ ಪಾವತಿಗೆ ವ್ಯವಸ್ಥೆಯಾಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ’ ಎಂದು ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ ಎಚ್ಚರಿಕೆ ನೀಡಿದರು.

ತಾಲ್ಲೂಕು ಗುತ್ತಿಗೆದಾರರ ಸಂಘದ ಸದಸ್ಯರು ಸೋಮವಾರ ಸಭೆ ನಡೆಸಿದರು.

ಎರಡು ವರ್ಷದಿಂದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಬೀದಿಗೆ ಬಿದ್ದು, ಮಾಡಿರುವ ಸಾಲ ಸಕಾಲಕ್ಕೆ ತೀರಿಸಲಾಗದೆ ಇಡೀ ಕುಟುಂಬಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿವೆ. ಸರ್ಕಾರಗಳು ₹10 ಕೋಟಿ ಹಣ ಇದ್ದರೆ ₹50 ಕೋಟಿಯ ಕಾಮಗಾರಿಗೆ ಟೆಂಡರ್ ಕಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ₹200 ಕೋಟಿ, ಕಾವೇರಿ ನೀರಾವರಿ ನಿಗಮ ₹150 ಕೋಟಿ, ಜೆಜೆಎಂ ₹50 ಕೋಟಿ, ಜಿಲ್ಲಾ ಪಂಚಾಯಿತಿ ₹10 ಕೋಟಿ, ಪುರಸಭೆ ಎಸ್ಎಫ್ಸಿ ಯೋಜನೆ ₹5 ಕೋಟಿ, ಸಣ್ಣ ನೀರಾವರಿ ಇಲಾಖೆ ₹6 ಕೋಟಿ ಬಾಕಿಯ ಪಟ್ಟಿಯಾಗಿದೆ ಎಂದರು.

ಗುತ್ತಿಗೆದಾರ ಎಸ್.ಆರ್.ಚಿಕ್ಕಣ್ಣ ಮಾತನಾಡಿ, ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ತಡವಾಗಿ ಪ್ರಾರಂಭವಾಗುತ್ತದೆ. ಸೈಟ್ ವಶಕ್ಕೆ ನೀಡುವಲ್ಲಿ ವಿಳಂಬವಾಗುತ್ತಿದೆ. ಕಾಮಗಾರಿಗಳ ಹಣ ಬಿಡುಗಡೆಯಾಗಿದ್ದರೂ, ಗುತ್ತಿಗೆದಾರರ ಬಿಲ್ ಪಾವತಿಗೆ ಅಧಿಕಾರಿಗಳು ಮತ್ತು ಸರ್ಕಾರ ಅಡ್ಡಿಯಾಗಿದೆ ಎಂದು ದೂರಿದರು.

ಗುತ್ತಿಗೆದಾರ ಜೆಸಿಬಿ ರಾಜಣ್ಣ, ತಾಲ್ಲೂಕಿನಲ್ಲಿ ಬಹುತೇಕ ಗುತ್ತಿಗೆದಾರರು ಕಾಂಗ್ರೆಸ್ ಪಕ್ಷದವರೆ ಇದ್ದಾರೆ. ಶಾಸಕರು, ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷದವರೇ ಆಗಿದ್ದರೂ ಎರಡು ವರ್ಷದಿಂದ ಬಿಲ್ಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಕೃಷ್ಣೆಗೌಡ, ಮಂಜಯ್ಯ, ರುಕ್ಮಾಂಗದ, ನಾಗರಾಜು ವೆಂಕಟೇಶ್, ಪರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.