ಕೆಜಿಎಫ್: ನಗರದಲ್ಲಿ ಸಾರ್ವಜನಿಕರ ನೆಮ್ಮದಿಗೆ ಕಂಟಕವಾಗಿದ್ದ ಇಬ್ಬರು ರೌಡಿಗಳನ್ನು ರಾಜ್ಯದ ಎರಡು ಜಿಲ್ಲೆಗಳಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಆದೇಶ ಹೊರಡಿಸಿದ್ದಾರೆ.

ಹೆನ್ರೀಸ್ ನಿವಾಸಿ ಚಂದ್ರಬೋಸ್ ಮತ್ತು ಆಂಡರಸನ್ ಪೇಟೆ ವಿಕ್ರಮ್ ಗಡಿಪಾರಾದ ರೌಡಿಗಳು. ಚಂದ್ರಬೋಸ್ ಗದಗ ಜಿಲ್ಲೆ ಮತ್ತು ವಿಕ್ರಮನನ್ನು ಯಾದಗಿರಿಗೆ ಆರು ತಿಂಗಳ ಮಟ್ಟಿಗೆ ಗಡಿಪಾರು ಮಾಡಲಾಗಿದೆ.

ಹೆನ್ರೀಸ್ ಹಾಗೂ 3ನೇ ಲೈನ್ ನಿವಾಸಿಯಾದ ಚಂದ್ರಬೋಸ್ ಎರಡು ಕೊಲೆ ಯತ್ನ ಸೇರಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಅವರ ಚಟುವಟಿಕೆ ಮಿತಿ ಮೀರಿದ್ದರಿಂದ ಗಡಿಪಾರು ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಬೆಮಲ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಾಲಾ ಪ್ರಸ್ತಾವ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಗಡಿಪಾರು ಮಾಡಲಾಗಿದೆ.

ಆಂಡರಸನ್ಪೇಟೆ ಲೂರ್ದ್ ನಗರ ನಿವಾಸಿಯಾದ ಆರೋಪಿ ವಿಕ್ರಮ್ ಮೇಲೆ ಕೊಲೆ 3 ಕೊಲೆ ಯತ್ನ, 2 ಹಲ್ಲೆ, 1 ಮನೆ ಕಳವು, 1 ಪ್ರಿಸನರ್ಸ್ ಆಕ್ಟ್ ಸೇರಿದಂತೆ ಒಟ್ಟು 11 ಪ್ರಕರಣಗಳು ದಾಖಲಾಗಿದ್ದವು. ವರ್ತನೆ ಬದಲಾಯಿಸಿಕೊಳ್ಳಲು ಅವಕಾಶ ನೀಡಿದ್ದರೂ ಆತ ಬದಲಾವಣೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಯಾದಗಿರಿ ನಗರಕ್ಕೆ ಗಡಿಪಾರು ಮಾಡಲಾಗಿದೆ.

ಡಿವೈಎಸ್ಪಿ ಲಕ್ಷ್ಮಯ್ಯ, ಸರ್ಕಲ್ ಇನ್ಸ್ಪೆಕ್ಟರ್ ನವೀನ್, ಮಾರ್ಕೊಂಡಯ್ಯ, ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಜಿ.ಮಾಲಾ, ಚಂದ್ರಶೇಖರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಚಲಪತಿ, ಸಿಬ್ಬಂದಿ ಗೋಪಿನಾಥ್, ವೇಣುಗೋಪಾಲ್, ಅಶೋಕ್, ರಮೇಶ್ ಜಂಬರಗಿ, ಲೋಕೇಶ್, ಮಹೇಂದ್ರ ಕುಮಾರ್, ಶಿವಪ್ರಸಾದ್, ವಿಶ್ವನಾಥ್, ಲಲಿತ, ಮನೋಹರ್ ಮತ್ತು ಶ್ರೀನಾಥ್ ಕಾರ್ಯಾಚರಣೆ ನಡೆಸಿದ್ದರು ಎಂದು ಎಸ್ಪಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.