ಮಧುಗಿರಿ: ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ಸಮೀಪ ಭಾನುವಾರ ಗಂಡು ಚಿರತೆ ಕೋಳಿ ಬೋನಿಗೆ ಬಿದ್ದಿದೆ.

ಗ್ರಾಮದ ರವಿಶಂಕರ್ ರೆಡ್ಡಿ ಎಂಬುವವರು ಜಮೀನಿನಲ್ಲಿ ಕೋಳಿ ಸಾಕಿದ್ದರು. ನಿತ್ಯ ಕಾಡು ಬೆಕ್ಕು ಬಂದು ಕೋಳಿಯನ್ನು ತಿಂದು ಹೋಗುತ್ತಿತ್ತು. ಕಾಡು ಬೆಕ್ಕನ್ನು ಹಿಡಿಯಲು ರವಿಶಂಕರ್ ರೆಡ್ಡಿ ಕೋಳಿ ಬೋನಿಗೆ ಎರಡು ಕೋಳಿಗಳನ್ನು ಕಟ್ಟಿದ್ದರು. ಆ ಬೋನಿಗೆ ಚಿರತೆ ಬಿದ್ದಿದೆ.

ತಪ್ಪಿಸಿಕೊಳ್ಳಲು ಶತ ಪ್ರಯತ್ನ ಮಾಡಿದೆ. ಆದರೆ, ಸಾಧ್ಯವಾಗಿಲ್ಲ. ಭಾನುವಾರ ರವಿಶಂಕರ್ ರೆಡ್ಡಿ ಕೋಳಿ ಬೋನು ನೋಡಿದಾಗ ಚಿರತೆ ಬಿದ್ದಿರುವುದನ್ನು ಕಂಡು ಗಾಬರಿಯಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಅಧಿಕಾರಿಗಳು ಚಿರತೆಯನ್ನು ಸಂರಕ್ಷಿಸಿ ತಿಮ್ಮಾಪುರ ಅರಣ್ಯಧಾಮಕ್ಕೆ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.