ಕುಣಿಗಲ್: ತಾಲ್ಲೂಕಿನ ಚೌಡನಕುಪ್ಪೆ ಗ್ರಾಮದ ವಸಂತಕುಮಾರ ಎಂಬುವರ ಕೋಳಿ ಫಾರಂಗೆ ಗುರುವಾರ ಬೆಳಗ್ಗೆ ಚಿರತೆ ನುಗ್ಗಿ ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿ ವಶಕ್ಕೆ ಪಡೆದಿದ್ದಾರೆ.

ಖಾಲಿ ಇದ್ದ ಕೋಳಿ ಫಾರಂಗೆ ಮೂರು ವರ್ಷದ ಗಂಡು ಚಿರತೆ ನುಗ್ಗಿದ್ದು, ಎಚ್ಚೆತ್ತ ಮಾಲೀಕರು ಫಾರಂ ಗೇಟಿಗೆ ಬೀಗ ಜಡಿದು, ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ಬೆಂಗಳೂರಿನ ಬನ್ನೇರುಘಟ್ಟದಿಂದ ಬಂದ ಅರಿವಳಿಕೆ ತಜ್ಞ ಉಮಾಶಂಕರ್ ನೇತೃತ್ವದ ತಂಡ ಅರವಳಿಕೆ ಚುಚ್ಚುಮದ್ದು ನೀಡಿ ಚಿರತೆ ವಶಕ್ಕೆ ಪಡೆದರು.

ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಅನುಪಮಾ, ವಲಯ ಅರಣ್ಯಾಧಿಕಾರಿ ಮಹಮ್ಮದ್ ಮನ್ಸೂರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.