ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ ಪರಿಣಾಮ ತುಮಕೂರು ಕೆಎಸ್‌ಆರ್‌ಟಿಸಿಗೆ ₹ 51 ಕೋಟಿ ನಷ್ಟ

Last Updated 25 ಮೇ 2020, 14:43 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರದ ಕೆಲವು ಮಾರ್ಗಸೂಚಿಗಳ ಅನ್ವಯ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿದೆ. ಆದರೆ ಕೆಎಸ್‌ಆರ್‌ಟಿಸಿಗೆ ಆದಾಯ ಮಾತ್ರ ಹೆಚ್ಚಾಗುತ್ತಿಲ್ಲ. ಬಸ್‌ ಸಂಚಾರ ಆರಂಭವಾಗಿದ್ದರೂ ಜನರಲ್ಲಿನ ಕೊರೊನಾ ಭಯ ಪ್ರಯಾಣಕ್ಕೆ ತಡೆಯೊಡ್ಡಿದೆ. ಅಲ್ಲದೆ ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರವಿಲ್ಲದ ಕಾರಣವೂ ಆದಾಯ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ.

ತುಮಕೂರು ಕೆಎಸ್‌ಆರ್‌ಟಿಸಿಗೆ ಕೊರೊನಾ ಪೂರ್ವದಲ್ಲಿ ದಿನಕ್ಕೆ ₹ 65ರಿಂದ 67 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು. ಈಗ ₹ 6 ಲಕ್ಷ ಸಂಗ್ರಹವಾಗುತ್ತಿದೆ. ಶೇ 10ರಷ್ಟು ಮಾತ್ರ ಗಳಿಕೆಯಾಗುತ್ತಿದೆ. ಬಸ್ ಓಡಾಟ, ಆದಾಯ ಗಳಿಗೆ ಹೀಗೆ ಶೇ 10ರಷ್ಟು ಮಾತ್ರ ಚಟುವಟಿಕೆಗಳು ಆರಂಭವಾಗಿವೆ. ಇದು ಸಂಸ್ಥೆಯ ಮೇಲೆ ಪರಿಣಾಮ ಬೀರುವುದು ಖಚಿತ.

ಲಾಕ್‌ಡೌನ್ ಪರಿಣಾಮ ಇಲ್ಲಿಯವರೆಗೆ ತುಮಕೂರು ಕೆಎಸ್‌ಆರ್‌ಟಿಸಿಗೆ ₹ 51 ಕೋಟಿ ನಷ್ಟವಾಗಿದೆ. ಕೇವಲ ಎರಡು ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಆದಾಯ ಕೋತಾ ಆಗಿದೆ ಅಂದರೆ ಅದು ಸಹಜವಾಗಿ ಸಂಸ್ಥೆಯ ಬೆಳವಣಿಗೆಗಳ ಮೇಲೂ ಪರಿಣಾಮ ಬೀರಲಿದೆ.

ತಾಲ್ಲೂಕು ಕೇಂದ್ರಗಳು ಸೇರಿದಂತೆ ಹೊರ ಜಿಲ್ಲೆಗಳಿಗೆ ನಿತ್ಯ ತುಮಕೂರಿನಿಂದ 130ರಿಂದ 150 ಬಸ್‌ಗಳು ಸಂಚರಿಸುತ್ತಿವೆ. ತುಮಕೂರಿನಿಂದ ಬೆಂಗಳೂರಿಗೆ ಜನರ ಓಡಾಟ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಿತ್ಯ 35ಕ್ಕೂ ಹೆಚ್ಚು ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಉಳಿದಂತೆ ಶಿರಾ, ಪಾವಗಡ, ಮೈಸೂರು, ಚಿತ್ರದುರ್ಗ, ಹಾಸನ ಜಿಲ್ಲೆಗಳಿಗೆ ಬಸ್ ಓಡಾಟ ಹೆಚ್ಚಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT