ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಹೊರಗಿನವನಲ್ಲ, ನನ್ನನ್ನು ‘ಹೊರಗಿನವರು’ ಎನ್ನುವುದನ್ನು ನಿಲ್ಲಿಸಿ: ಸೋಮಣ್ಣ

Published 16 ಮಾರ್ಚ್ 2024, 23:55 IST
Last Updated 16 ಮಾರ್ಚ್ 2024, 23:55 IST
ಅಕ್ಷರ ಗಾತ್ರ

ತುಮಕೂರು: ‘ನಾನು ಹೊರಗಿನವ ಅಲ್ಲ. ನನ್ನನ್ನು ‘ಹೊರಗಿನವರು’ ಎನ್ನುವುದನ್ನು ಇವತ್ತೇ ನಿಲ್ಲಿಸಿ. ಮುಂದಿನ ಎರಡು ದಿನದಲ್ಲಿ ನಗರದಲ್ಲಿ ಮನೆ ಮಾಡುತ್ತೇನೆ. ತುಮಕೂರನ್ನು ಮಾದರಿ ಜಿಲ್ಲೆ ಮಾಡುತ್ತೇನೆ’ ಎಂದು ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್‌.ಪರಮೇಶ್‌ ಏರ್ಪಡಿಸಿದ್ದ ಹಿತೈಷಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನನ್ನ ಸ್ಪರ್ಧೆ ಬಗ್ಗೆ ಜಿಲ್ಲೆಯ ಕೆಲವು ಪುಣ್ಯಾತ್ಮರು ಆಡಿದ ಮಾತುಗಳಿಂದ ತುಂಬಾ ನೋವಾಗಿದೆ’ ಎಂದರು.

‘ಲೋಕಸಭಾ ಕ್ಷೇತ್ರದಲ್ಲಿ 16 ಲಕ್ಷ ಮತದಾರರ ಪೈಕಿ 3.45 ಲಕ್ಷ ಮತದಾರರು ಇರುವ ಒಂದು ಸಮಾಜ ನನ್ನನ್ನು ತುಳಿಯುತ್ತಿದೆ. ಇದರಿಂದ ನನ್ನ ಗತಿ ಏನಾಗಬಹುದು ಎನ್ನುವುದಕ್ಕಿಂತ ನಿಮ್ಮ ಅಸ್ಮಿತೆ ಯಾವ ರೀತಿಯಾಗುತ್ತದೆ ಎಂಬುವುದನ್ನು ಚಿಂತನೆ ಮಾಡಬೇಕು’ ಎಂದು ಹೇಳಿದರು.

‘ವಿಧಾನಸಭಾ ಚುನಾವಣೆಯಲ್ಲಿ ನನಗೆ ಆದ ಅಪಚಾರವನ್ನು ರಾಷ್ಟ್ರದ ನಾಯಕರು ಮನಗಂಡು ಇಲ್ಲಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದಾರೆ.‌ ಕ್ರಿಯಾಶೀಲ ರಾಜಕಾರಣಿಯನ್ನು ಮನೆಯಲ್ಲಿ ಕೂರಿಸಬಾರದು ಎಂದು ಸ್ಪರ್ಧೆಗೆ ಅನುವು ಮಾಡಿ ಕೊಟ್ಟಿದ್ದಾರೆ.  ತುಮಕೂರಿನಿಂದ ಸ್ಪರ್ಧಿಸುವುದು ಬೇಡ ಎಂದು ವರಿಷ್ಠರು ಹೇಳಿದರೆ ತಕ್ಷಣವೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ’ ಎಂದರು.

ಡಾ.ಎಸ್.ಪರಮೇಶ್, ಕೋರಿ ಮಂಜುನಾಥ್‌, ಆಡಿಟರ್‌ ವಿಶ್ವನಾಥ್, ಚಂದ್ರಮೌಳಿ, ಟಿ.ಕೆ.ನಂಜುಡಂಪ್ಪ, ಚಂದ್ರಶೇಖರ್, ನಿರಂಜನ್‌, ವೀಣಾ ಪರಮೇಶ್‌ ಭಾಗವಹಿಸಿದ್ದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 3.45 ಲಕ್ಷ ಮತದಾರರಿರುವ ಒಂದು ಸಮಾಜ ನನ್ನನ್ನು ಇಷ್ಟೊಂದು ತುಳಿಯುತ್ತಿದೆ
– ವಿ. ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT