ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನ KIADB ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್.ಮೂರ್ತಿ 8 ನಿವೇಶನಗಳ ಒಡೆಯ!

Published 1 ಜೂನ್ 2023, 14:13 IST
Last Updated 1 ಜೂನ್ 2023, 14:13 IST
ಅಕ್ಷರ ಗಾತ್ರ

ತುಮಕೂರು: ಮೈಸೂರಿನ ಕೆಐಎಡಿಬಿ ಕಾರ್ಯನಿರ್ವಾಹಕ ಎಂಜಿನಿಯರ್ ಸಿ.ಎನ್.ಮೂರ್ತಿ ಅವರು ನಗರ ಹಾಗೂ ವಿವಿಧೆಡೆ 8 ನಿವೇಶ, 2 ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ.

₹7.76 ಲಕ್ಷ ನಗದು, 1 ಕೆ.ಜಿ 154 ಗ್ರಾಂ ಬಂಗಾರ, 3 ಕೆ.ಜಿ 516 ಗ್ರಾಂ ಬೆಳ್ಳಿ, 8 ನಿವೇಶನಗಳು, 2 ಮನೆ, 3 ವಾಹನ ಹೊಂದಿರುವುದು ಪತ್ತೆಯಾಗಿದೆ. ಇವುಗಳ ಒಟ್ಟು ಮೌಲ್ಯ ₹3.16 ಕೋಟಿ ಎಂದು ಅಂದಾಜು ಮಾಡಲಾಗಿದೆ.

ನಗರದ ಕೋತಿತೋಪಿನ ಶಂಕರಪುರಂ ಮನೆ ಹಾಗೂ ಅವರ ಮಾವ, ನಾದಿನಿ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಬುಧವಾರ ತಡರಾತ್ರಿ ವರೆಗೂ ಶೋಧ ಕಾರ್ಯ ನಡೆದಿತ್ತು.

ದಾಖಲೆಗಳ ಪರಿಶೀಲನೆ ಕಾರ್ಯ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಆದಾಯ ಹೊಂದಿರುವುದಕ್ಕೆ ದಾಖಲೆಗಳು ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ವಲಿಬಾಷಾ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT