ಗುರುವಾರ , ಜನವರಿ 16, 2020
22 °C

ವಿಷ ಕುಡಿದ ಪ್ರೇಮಿಗಳು; ಯುವತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ತಾಲ್ಲೂಕಿನ ಕಂಚಿರಾಯನಬೆಟ್ಟದಲ್ಲಿ ಪ್ರೇಮಿಗಳಿಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಯುವತಿ ಮೃತಪಟ್ಟಿದ್ದಾಳೆ. 

ಮೃತ ಯುವತಿ ಮಸರುಕೊಟ್ಟಿಗೆ ಸಹನಾ (18) ಎಂದು ಗುರುತಿಸಲಾಗಿದ್ದು, ಯುವಕ ಗೋವಿಂದಘಟ್ಟದ ಪ್ರೇಮ್‌ಕುಮಾರ್ (21) ಅಸ್ವಸ್ಥಗೊಂಡಿದ್ದಾನೆ.

ಕಂಚಿರಾಯನ ಬೆಟ್ಟದಲ್ಲಿ ವಿಷ ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಬೆಟ್ಟಕ್ಕೆ ಬಂದಿದ್ದ ಸಾರ್ವಜನಿಕರು ಆಂಬ್ಯುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿದರು. ಯುವತಿ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಪ್ರೇಮ್‌ಕುಮಾರ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)