ಭಾನುವಾರ, ಆಗಸ್ಟ್ 9, 2020
25 °C

ಮಧುಗಿರಿ: 12 ಮಂದಿಗೆ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ತಾಲ್ಲೂಕಿನಲ್ಲಿ 12 ಜನರಿಗೆ ಶುಕ್ರವಾರ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 38 ವರ್ಷದ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ಎಲ್ಲರ ನಿದ್ದೆಗೆಡಿಸಿದೆ.

ತಾಲ್ಲೂಕಿನ ಶ್ರಾವಂಡನಹಳ್ಳಿಯ 26 ವರ್ಷದ ಮಹಿಳೆ, ಗೊಂದಿಹಳ್ಳಿಯ 65 ವರ್ಷದ ವೃದ್ದ, ಚಿಕ್ಕದಾಳವಟ್ಟದ 63 ವರ್ಷದ ವೃದ್ಧ, ಅಮರಾವತಿಯ 22 ವರ್ಷ ಯುವಕ, ಆಚೇನಹಳ್ಳಿಯ 8 ವರ್ಷದ ಬಾಲಕ, ಮಧುಗಿರಿ ಪಟ್ಟಣದ ರಾಘವೇಂದ್ರ ಕಾಲೊನಿಯ 41 ವರ್ಷದ ವ್ಯಕ್ತಿ, ಶಂಕರ್ ಚಿತ್ರಮಂದಿರ ಸಮೀಪದ 37 ವರ್ಷದ ವ್ಯಕ್ತಿ, 23ನೇ ವಾರ್ಡ್‌ನ 24 ವರ್ಷದ ಯುವಕ, ಇಂದಿರಾ ನಗರದ 15 ವರ್ಷದ ಬಾಲಕ, ಮೇಕೆ ಬಂಡೆಯ ನಿವಾಸಿ 28 ವರ್ಷ, 11ನೇ ವಾರ್ಡ್‌ ನಿವಾಸಿ 53 ವರ್ಷದ ವ್ಯಕ್ತಿ ಹಾಗೂ ಲೋಕೋಪಯೋಗಿ ವಸತಿ ಗೃಹದಲ್ಲಿರುವ 28 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ತಾಲ್ಲೂಕಿನಲ್ಲಿ ಇಲ್ಲಿಯವರೆಗೆ 25 ಮಂದಿ ಸೋಂಕಿತರಿದ್ದಾರೆ. ಒಬ್ಬರು ಸಾವನ್ನಪ್ಪಿದ್ದಾರೆ, ಇಬ್ಬರು ಗುಣಮುಖರಾಗಿದ್ದು, 126 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 1270 ಮಂದಿಯ ಪರೀಕ್ಷಾ ವರದಿ ಬರಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.