ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಣ್ವಾನದಿಯ ಉಗಮ ಸ್ಥಳದಲ್ಲಿ ಕಲುಷಿತ ಸಂಗ್ರಹ’

Published 12 ಜನವರಿ 2024, 5:36 IST
Last Updated 12 ಜನವರಿ 2024, 5:36 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಎನ್‌ಇಎಸ್‌ ಬಡಾವಣೆಯ ಕರಣೀಕರ ಕಲ್ಯಾಣಿ ಬಳಿ ಕಣ್ವಾನದಿಯ ಉಗಮ ಸ್ಥಳದಲ್ಲಿ ಒಳಚರಂಡಿಯ ಕಲುಷಿತ ಕೆರೆಯಂತೆ ನಿಂತು ಜಲಮಾಲಿನ್ಯ ಉಂಟಾಗಿದೆ ಎಂದು ನಿವೃತ್ತ ವಾಯುಸೇನೆ ಅಧಿಕಾರಿ ಶಿವಲಿಂಗಯ್ಯ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಚನ್ನಪ್ಪಬಡಾವಣೆ, ಕೋಟಪ್ಪನಪಾಳ್ಯ, ಎನ್‌ಇಎಸ್‌ ಬಡಾವಣೆ ಹಾಗೂ ಇತರೆಡೆಗಳಲ್ಲಿ ಒಳಚರಂಡಿಗಳ ಚೇಂಬರ್‌ ಒಡೆದು ಹೋಗಿವೆ. ರೇಷ್ಮೆ ಇಲಾಖೆಯ ಫಾರ್ಮ್‌ ಬಳಿ ಕಲುಷಿತ ನೀರು ಹರಿದು ಬರುತ್ತಿದೆ. ಕಣ್ವನದಿ ಉಗಮ ಸ್ಥಳದಲ್ಲಿನ ಸರ್ಕಾರಿ ಭೂಮಿಯಲ್ಲಿ ಕೆರೆಯಂತೆ ಸಂಗ್ರಹವಾಗಿದೆ. ತಿರುಮಲೆ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯವಿದೆ ಎಂದು ಆರೋಪಿಸಿದರು.

ಪಕ್ಕದಲ್ಲಿ ಎರಡು ಖಾಸಗಿ ಶಾಲೆ, ಅಂಗನವಾಡಿ ಕೇಂದ್ರವಿದೆ. ಶಾಲೆಗಳಲ್ಲಿ ಸಾವಿರಾರು ಮಕ್ಕಳು ಕಲಿಯುತ್ತಿದ್ದಾರೆ. ಪ್ರವಾಸಿ ಮಂದಿರ, ಕೃಷಿ ಇಲಾಖೆ ಕಚೇರಿ ಮತ್ತು ಎನ್‌ಇಎಸ್‌ ಮತ್ತು ನಟರಾಜ ಬಡಾವಣೆ ನಿವಾಸಿಗಳಿಗೆ ಒಂಚರಂಡಿ ಕಲುಷಿತ ಸಂಗ್ರಹವಾಗಿರುವುದರಿಂದ ದುರ್ನಾತ ಬೀರುತ್ತಿದೆ. ಹಗಲಿನಲ್ಲಿಯೇ ಸೊಳ್ಳೆ, ಇಲಿ, ಹೆಗ್ಗಣ ಮನೆಗೆ ನುಗ್ಗುತ್ತಿವೆ. ಪುರಸಭೆ ಅಧಿಕಾರಿಗಳು ಒಳಚರಂಡಿ ದುರಸ್ತಿ ಪಡಿಸಬೇಕು.  ಜಲಮೂಲದ ರಕ್ಷಣಗೆ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT