ಹಲವು ತಿಂಗಳುಗಳಿಂದ ತಂತಿ ತುಂಡಾಗಿ ಬಿದ್ದಿದ್ದು, ಅಧಿಕಾರಿಗಳು ಸಮೀಪದಲ್ಲೇ ಇದ್ದ ಕಂಬಕ್ಕೆ ಸುತ್ತಿ ಹೋಗಿದ್ದರು. ಗಾಳಿ, ಮಳೆಗೆ ಕಂಬದಲ್ಲಿ ಸುತ್ತಿದ್ದ ತಂತಿ ಮತ್ತೆ ಕೆಳಗೆ ಬಿದ್ದಿತ್ತು. ಹುಲ್ಲು ಕತ್ತರಿಸಲು ಹೋಗಿದ್ದ ಲಕ್ಷ್ಮಯ್ಯ ಆಕಸ್ಮಿಕವಾಗಿ ತಂತಿ ಮೇಲೆ ಕಾಲು ಇಟ್ಟ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.