ಮಧುಗಿರಿ: ತಾಲ್ಲೂಕಿನ ಪುರವರ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸೆಪ್ಟೆಂಬರ್ 8ರಂದು ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ ಎಂದು ಡಾ.ಸಾಹೇ ಅಭಿವೃದ್ಧಿ ಟ್ರಸ್ಟ್ (ರಿ)ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ಸಾಹೇ ಅಭಿವೃದ್ಧಿ ಟ್ರಸ್ಟ್‌ನಿಂದ 51 ಜೋಡಿಗಳಿಗೆ ಸಾಮೂಹಿಕ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ವಧುವಿಗೆ ಸೀರೆ, ಮಾಂಗಲ್ಯ, ಕಾಲುಂಗುರ ಹಾಗೂ ವರನಿಗೆ ಅಂಗಿ, ಧೋತಿ, ಶಲ್ಯ ಕಾಲ್ಮಿಂಚು ನೀಡಲಾಗುವುದು ಎಂದಿದ್ದಾರೆ.
ಉಚಿತ ವಿವಾಹಕ್ಕೆ ನೊಂದಾಯಿಸಿಕೊಳ್ಳಲು, ಹೆಚ್ಚಿನ ಮಾಹಿತಿಗಾಗಿ 9731696864, 9052466016 ಸಂಪರ್ಕಿಸಬಹುದು.