ಶುಕ್ರವಾರ, ಫೆಬ್ರವರಿ 3, 2023
15 °C

ನಾಳೆಯಿಂದ ಮೇಯರ್ ಕಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಮಹಾನಗರ ಪಾಲಿಕೆ ವತಿಯಿಂದ ತುಮಕೂರು ಮೇಯರ್ ಕಪ್ ಹಾಗೂ ಪಾಲಿಕೆ ಕ್ರೀಡಾಕೂಟ ಜ. 27ರಿಂದ 29ರ ವರೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ.

ಮೇಯರ್ ಕಪ್ ಪ್ರೀಮಿಯರ್ ವಾಲಿಬಾಲ್ ಲೀಗ್, ಮೇಯರ್ ಕಪ್ ಹೊನಲು ಬೆಳಕಿನ ಪುರುಷರ ಕಬಡ್ಡಿ ಚಾಂಪಿಯನ್ ಕಪ್, ಕುಸ್ತಿ, ಕೊಕ್ಕೊ ಪಂದ್ಯಾವಳಿ, ಪ್ರೌಢಶಾಲಾ ಮಕ್ಕಳಿಗೆ ಅಥ್ಲೆಟಿಕ್ ಕ್ರೀಡೆ, ಪಾಲಿಕೆ ಸದಸ್ಯರು, ಸಿಬ್ಬಂದಿ, ಪೌರಕಾರ್ಮಿಕರಿಗೆ ವಿವಿಧ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ನೋಂದಣಿ ಅಭಿಯಾನ

ತುಮಕೂರು: ಸ್ವಾಭಿಮಾನಿ ಮಾದಿಗ ಮಹಾಸಭಾ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಬುಧವಾರ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ಚಾಲನೆ ನೀಡಲಿದ್ದಾರೆ.

ಸದಾಶಿವನಗರದ ನಾಗಾರ್ಜುನ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಧ್ಯಾಹ್ನ 2 ಗಂಟೆಗೆ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ. ಮುಖಂಡರಾದ ನರಸೀಯಪ್ಪ, ಚಂದ್ರಹಾಸ್, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ, ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ.

ವಾಲಿಬಾಲ್ ತಂಡಕ್ಕೆ ಆಯ್ಕೆ

ತುಮಕೂರು: ರಾಜ್ಯಮಟ್ಟದ ಹಿರಿಯರ ಅಂತರ್ ಜಿಲ್ಲಾ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಜಿಲ್ಲಾ ಮಟ್ಟದ ತಂಡವನ್ನು ಆಯ್ಕೆ ಮಾಡಲಾಯಿತು.

ಟಿ.ಡಿ.ರವಿಕುಮಾರ್, ಪಿ.ಸಿ.ಸತೀಶ್, ಸಿದ್ಧರಾಜು, ನಿತಿನ್‌ರಾಜ್, ದಿಲೀಪ್, ತೇಜಸ್, ಶ್ರೇಯಾಂಕ್, ದರ್ಶನ್, ಪುನೀತ್, ಸುಭಾಷ್, ವಿವೇಕ್, ರವೀಂದ್ರ ಆಯ್ಕೆಯಾದವರು. ತುಮಕೂರು ಜಿಲ್ಲಾ ವಾಲಿಬಾಲ್ ಅಸೋಷಿಯೇಷನ್ ವತಿಯಿಂದ ಸಂಘದ ಅಧ್ಯಕ್ಷ ಗಂಗಾಧರಗೌಡ, ಉಪಾಧ್ಯಕ್ಷ ಟಿ.ವಿ.ರಘುಪ್ರಸಾದ್, ಕಾರ್ಯದರ್ಶಿ ಟಿ.ಬಿ.ರವೀಂದ್ರ ನೇತೃತ್ವದಲ್ಲಿ ಆಯ್ಕೆ ಮಾಡಲಾಗಿದೆ.

ಜ. 26ರಿಂದ 29ರ ವರೆಗೆ ಮೈಸೂರಿನಲ್ಲಿ ಪಂದ್ಯಾವಳಿ ನಡೆಯಲಿದ್ದು, ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.