ತುಮಕೂರು: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಪ್ರಸ್ತುತ ಪ್ರತಿ ದಿನ ಹಾಲು ಸಂಗ್ರಹ ಪ್ರಮಾಣ 10.50 ಲಕ್ಷ ಲೀಟರ್ಗೆ ಏರಿಕೆಯಾಗಿದೆ. ಮೇ ತಿಂಗಳ ಅಂತ್ಯದಲ್ಲಿ 9.50 ಲಕ್ಷ ಲೀಟರ್ ಸಂಗ್ರಹವಾಗಿತ್ತು. ದಿನಗಳು ಕಳೆದಂತೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಳವಾಗುತ್ತಿದೆ.

ತಾಲ್ಲೂಕಿನ ಮಲ್ಲಸಂದ್ರದ ತುಮುಲ್ ಆಡಳಿತ ಕಚೇರಿ ಬಳಿ ತಿರುಪತಿ ತಿಮ್ಮಪ್ಪ ದೇವಸ್ಥಾನದ ಲಡ್ಡು ತಯಾರಿಕೆಗೆ ತುಪ್ಪ ಸಾಗಿಸುವ ಟ್ಯಾಂಕರ್ ವಾಹನಕ್ಕೆ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಚಾಲನೆ ನೀಡಿದ ನಂತರ ಮಾತನಾಡಿದರು.

ತಿರುಪತಿ ತಿಮ್ಮಪ್ಪನ ದೇವಾಲಯಕ್ಕೆ ನೇರವಾಗಿ ತುಪ್ಪ ಪೂರೈಸುವ ಅವಕಾಶವನ್ನು ಕೆಎಂಎಫ್ ತನ್ನ ವ್ಯಾಪ್ತಿಯ ಹಾಲು ಒಕ್ಕೂಟಗಳಿಗೆ ಕಲ್ಪಿಸಿದೆ. ಹಾಗಾಗಿ ತುಪ್ಪವನ್ನು ಟ್ಯಾಂಕರ್ ಮೂಲಕ ಟಿಟಿಡಿಗೆ ಪೂರೈಸುವ ಕಾರ್ಯವನ್ನು ತುಮುಲ್ ಆರಂಭಿಸಿದೆ ಎಂದರು.

ಪ್ರತಿದಿನ ಶೇಖರಣೆ ಆಗುತ್ತಿರುವ ಹಾಲಿನಲ್ಲಿ ಬೆಂಗಳೂರಿನಲ್ಲಿ 1.95 ಲಕ್ಷ ಲೀಟರ್, ತುಮಕೂರಿನಲ್ಲಿ 1.20 ಲಕ್ಷ ಲೀಟರ್ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ 1 ಲಕ್ಷ ಲೀಟರ್, ಕೇರಳದಲ್ಲಿ 50 ಸಾವಿರ ಲೀಟರ್ ಮಾರಾಟವಾಗುತ್ತಿದೆ. 80 ಸಾವಿರ ಲೀಟರ್ ಹಾಲನ್ನು ಪೌಡರ್ ಮಾಡಿ ಶಾಲಾ ಮಕ್ಕಳ ಕ್ಷೀರಭಾಗ್ಯ ಯೋಜನೆಗೆ ಕೊಡಲಾಗುತ್ತಿದೆ. 1 ಲಕ್ಷ ಲೀಟರ್ ಮೊಸರು, 4 ಟ್ಯಾಂಕರ್ ಲೋಡ್ ತುಪ್ಪ ಮಾರಾಟವಾಗುತ್ತಿದೆ. ತುಮುಲ್ ಸಂಗ್ರಹಿಸುವ ಎಲ್ಲ ಹಾಲನ್ನೂ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತುಮುಲ್ ನಿರ್ದೇಶಕರಾದ ಡಿ.ಕೃಷ್ಣಕುಮಾರ್, ಮಹಾಲಿಂಗಪ್ಪ, ಎಂ.ಕೆ.ಪ್ರಕಾಶ್, ಭಾರತಿ ಶ್ರೀನಿವಾಸ್, ಪ್ರಕಾಶ್, ನಂಜೇಗೌಡ, ನಾಗೇಶ್ಬಾಬು, ಸಿದ್ದಲಿಂಗಯ್ಯ, ಚಂದ್ರಶೇಖರರೆಡ್ಡಿ, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.