ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್: ನಾಲ್ಕು ವರ್ಷದ ನಂತರ ಉದ್ಘಾಟನೆ ಭಾಗ್ಯ!

ಕುಣಿಗಲ್‌ ಮಿನಿ ವಿಧಾನಸೌಧದಲ್ಲಿ ನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು
Published 29 ಫೆಬ್ರುವರಿ 2024, 8:04 IST
Last Updated 29 ಫೆಬ್ರುವರಿ 2024, 8:04 IST
ಅಕ್ಷರ ಗಾತ್ರ

ಕುಣಿಗಲ್: ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಾಲ್ಕು ವರ್ಷಗಳಿಂದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಮಾರ್ಚ್ 1ರಂದು ಉದ್ಘಾಟನೆ ಭಾಗ್ಯ ಒದಗಿದೆ.

ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿದ್ದ ತಾಲ್ಲೂಕು ಕಚೇರಿ ಕಟ್ಟಡ ಶಿಥಿಲಗೊಂಡ ಕಾರಣ ನೂತನ ಕಟ್ಟಡ ನಿರ್ಮಾಣಕ್ಕೆ ಅಂದಿನ ಶಾಸಕ ಎಸ್.ಪಿ. ಮುದ್ದಹನುಮೇಗೌಡ ಮತ್ತು ವೈ.ಕೆ.ರಾಮಯ್ಯ ನಡುವೆ ಪೈಪೋಟಿ ನಡೆದಿತ್ತು. ಮುದ್ದಹನುಮೇಗೌಡ ಅವರು ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಪಕ್ಕದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒಲವು ತೋರಿದ್ದರು. ವೈ.ಕೆ.ರಾಮಯ್ಯ ಹಳೆ ಕಚೇರಿ ಜಾಗದಲ್ಲಿ ನಿರ್ಮಾಣಕ್ಕೆ ಒಲವು ತೋರಿದ್ದರು.

ಅಂತಿಮವಾಗಿ ಹಳೆ ಕಚೇರಿ ಜಾಗದಲ್ಲಿ ನಿರ್ಮಾಣಕ್ಕೆ ಮುಂದಾಗಿ ಶಾಸಕರಾಗಿದ್ದ ಬಿ.ಬಿ.ರಾಮಸ್ವಾಮಿ ಗೌಡ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದ್ದರು. ನಂತರ ಶಾಸಕ ಡಿ.ನಾಗರಾಜಯ್ಯ ಅವಧಿಯಲ್ಲಿ ಹೆಚ್ಚಿನ ಅನುದಾನ ದೊರೆತು ಕಾಮಗಾರಿ ಕುಂಟುತ್ತ ಸಾಗಿತ್ತು. ಡಾ.ರಂಗನಾಥ್ ಶಾಸಕರಾಗಿದ್ದ ಮೊದಲ ಅವಧಿಯಲ್ಲಿ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು, ಶಿಥಿಲವಾಗಿದ್ದ ಹಳೇ ಕಟ್ಟಡ ಸೋರುತ್ತಿದ್ದ ಕಾರಣ ಉದ್ಘಾಟನೆಗೂ ಮುನ್ನ ಅಧಿಕಾರಿಗಳು ಹೊಸ ಕಟ್ಟಡದಲ್ಲಿ ಸೇರಿಕೊಂಡು ಕಾರ್ಯನಿರ್ವಹಿಸಲು ಪ್ರಾರಂಭಿಸಿದರು.

ಕಟ್ಟಡ ನಿರ್ಮಾಣವಾಗಿದ್ದರೂ ಮುಂಭಾಗದಲ್ಲಿ ನಿರ್ಮಾಣವಾಗಬೇಕಿದ್ದ ಚರಂಡಿ, ರಸ್ತೆ ಮತ್ತು ಉದ್ಯಾನ ಇನ್ನೂ ಪ್ರಾರಂಭವಾಗಿಲ್ಲ. ಶುಕ್ರವಾರ ಉದ್ಘಾಟನೆ ನಿಗದಿಯಾಗಿರುವ ಕಾರಣ ಕಳೆದ ವಾರದಿಂದ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT