ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಬಿತ್ತನೆ ಶೇಂಗಾ ನೀಡುತ್ತಿಲ್ಲ: ಆರೋಪ

Last Updated 4 ಜೂನ್ 2020, 9:53 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಹೋಬಳಿ ಯಾದ್ಯಂತ ಮಳೆಯಾಗಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ನೀಡುತ್ತಿರುವ ಬಿತ್ತನೆ ಶೇಂಗಾ ಪರಿಶಿಷ್ಟರಿಗೆ ಸಿಗುತ್ತಿಲ್ಲ ಎಂದು ಪರಿಶಿಷ್ಟ ಪಂಗಡದ ರೈತರು ಅರೋಪಿಸಿದ್ದಾರೆ.

ವಾರದಿಂದ ಶೇಂಗಾ ವಿತರಿಸಲಾಗುತ್ತಿದೆ. ಕೇವಲ 2–3 ದಿನ ಮಾತ್ರ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇಂಗಾ ವಿತರಿಸಿ ನಿಲ್ಲಿಸಿದ್ದಾರೆ. ಈ ಬಗ್ಗೆ ಕೇಳಿದರೆ ನಿಮ್ಮ ಕೋಟಾ ಮುಗಿದಿದೆ. ಸರ್ಕಾರ ಹೆಚ್ಚುವರಿ
ಕೋಟಾ ನೀಡಿದಲ್ಲಿ ನಿಮಗೆ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿ ವಿತರಣೆ ನಿಲ್ಲಿಸಿದ್ದಾರೆ. ಆದರೆ, ಸಾಮಾನ್ಯ ರೈತರಿಗೆ ನೀಡುತ್ತಿದ್ದಾರೆ ಎಂದು ವೈ.ಎನ್.ಹೊಸಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಆರೋಪಿಸಿದರು.

‘ಹೋಬಳಿಯ ಎರಡು ವಿತರಣ ಕೇಂದ್ರಗಳಲ್ಲಿ ಒಟ್ಟು 244 ಕ್ವಿಂಟಲ್ ಬಿತ್ತನೆ ಬೀಜವನ್ನು ಪರಿಶಿಷ್ಟ ಪಂಗಡದ ರೈತರಿಗೆ ಸರ್ಕಾರ ಮೀಸಲಿಟ್ಟಿತ್ತು. ಅದರಂತೆ ಈಗಾಗಲೇ ನಮ್ಮ ಕೇಂದ್ರದಿಂದ 162.04 ಕ್ವಿಂಟಲ್ ನೀಡಿದ್ದೇವೆ. ಮೇಲಧಿಕಾರಿಗಳ ಸೂಚನೆಯಂತೆ ಮುಂದೆ ವಿತರಿಸಲಾಗುವುದು’ ಎಂದು ವೈ.ಎನ್.ಹೊಸಕೋಟೆ ವಿತರಣಾ ಕೇಂದ್ರದ ಅಧಿಕಾರಿ ಈರಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT