ಸೋಮವಾರ, ಸೆಪ್ಟೆಂಬರ್ 20, 2021
21 °C

ಡಾಕ್ಟರ್ ವಾಟರ್‌ಗೆ ನೀರಿನ ಮಾಪಕ ಅಳವಡಿಕೆಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನಗರದ 7 ಕಡೆ ಹೈದಾರಾಬಾದ್‌ನ ವಾಟರ್ ಹೆಲ್ತ್ ಇಂಡಿಯಾ ಲಿಮಿಟೆಡ್ ನಿರ್ವಹಣೆ ಮಾಡುತ್ತಿರುವಡಾಕ್ಟರ್ ವಾಟರ್ ಶುದ್ಧ ನೀರಿನ ಘಟಕಗಳಿಗೆ ನೀರಿನ ಮಾಪಕಗಳನ್ನು (ವಾಟರ್ ಮೀಟರ್) 5 ದಿನದೊಳಗೆ ಅಳವಡಿಸಬೇಕು. ಇಲ್ಲದೇ ಇದ್ದಲ್ಲಿ ಶುದ್ಧ ನೀರಿನ ಘಟಕಗಳನ್ನು ಮಹಾನಗರ ಪಾಲಿಕೆ ವಶಕ್ಕೆ ಪಡೆಯಲಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಬಾಲನ್ ಕಂಪನಿಗೆ ನೋಟಿಸ್ ನೀಡಿದ್ದಾರೆ.

7ನೇ ವಾರ್ಡಿನ ಶಿಶುವಿಹಾರ, 25ನೇ ವಾರ್ಡಿನಲ್ಲಿರುವ ಮುನ್ಸಿಪಲ್ ಲೇ ಔಟ್, ವಾರ್ಡ್ 32ರ ವ್ಯಾಪ್ತಿಯ ಗೋಕುಲದಲ್ಲಿ 2014ರಲ್ಲಿ ಘಟಕ ನಿರ್ಮಿಸಿದ್ದು, ಮುನ್ಸಿಪಲ್ ಕಾಯ್ದೆ ಪ್ರಕಾರ ಮೂರು ಸ್ಥಳಗಳಲ್ಲಿ ಘಟಕ ನಿರ್ವಹಣೆ ಮಾಡಲು ನೀಡಲಾದ ಪರವಾನಗಿ ಅವಧಿ 2017ರಲ್ಲೇ ಮುಕ್ತಾಯವಾಗಿದೆ. ಪಾಲಿಕೆಗೂ ಯಾವುದೇ ಶುಲ್ಕ ಪಾವತಿಯಾಗಿಲ್ಲ. 2017ರ ನಂತರದಲ್ಲಿ ಪರವಾನಗಿ ನವೀಕರಣಗೊಂಡಿಲ್ಲ ಎಂದು ತಿಳಿಸಿದ್ದಾರೆ.

ವಾರ್ಡ್ 30 ನಳಮ್ಮ ಸ್ಕೂಲ್ ಹತ್ತಿರ 18 ವಾರ್ಡಿನ ಶಾಂತಿನಗರ, 10ನೇ ವಾರ್ಡಿನ ಆಜಾದ್ ಪಾರ್ಕ್ , ದಕ್ಷಿಣ ಭಾಗದಲ್ಲಿ ಮತ್ತು ವಾರ್ಡ್ ಸಂಖ್ಯೆ 31ರ ಶೆಟ್ಟಿಹಳ್ಳಿ ಮುಖ್ಯ ರಸ್ತೆ ಪಂಪು ಮನೆ ಹತ್ತಿರ ಈ ನಾಲ್ಕು ಸ್ಥಳಗಳಲ್ಲಿ 2016ನೇ ಸಾಲಿನಲ್ಲಿ ನಿರ್ಮಿಸಿದ್ದು, ಇವುಗಳ ನಿರ್ವಹಣೆ ಮಾಡಲು ನೀಡಿದ ಅವಧಿ 2019ರ ಜುಲೈ 19ಕ್ಕೆ ಮುಕ್ತಾಯವಾಗಲಿದೆ ಎಂದು ನೋಟಿಸ್‌ನಲ್ಲಿ ಆಯುಕ್ತರು ತಿಳಿಸಿದ್ದಾರೆ.

ಘಟಕಗಳ ನಿರ್ವಹಣೆ ಮುಂದುವರಿಸಲು ಹೊಸದಾಗಿ ಪರವಾನಗಿ ನೀಡುವುದು, ಕರಾರು ಮಾಡಿಕೊಳ್ಳುವುದು ಅವಶ್ಯವಿದೆ. ಘಟಕದಿಂದ ದಿನನಿತ್ಯ ಬಳಕೆಯಾಗುತ್ತಿರುವ ನೀರಿನ ಪ್ರಮಾಣದ ಅಂಕಿಅಂಶಗಳು ಅಗತ್ಯವಿರುತ್ತದೆ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.