ಭಾನುವಾರ, ಮಾರ್ಚ್ 26, 2023
23 °C
ಪಿಡಿಒಗಳಿಗೆ ಸೂಚನೆ

ನರೇಗಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ಶಾಸಕ ಎಂ.ವಿ. ವೀರಭದ್ರಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ: ‘ನರೇಗಾ ಕಾಮಗಾರಿ ಮಾಡಿಸುವಾಗ, ಹಾಗೂ ಕಾಮಗಾರಿಗಳಿಗೆ ಚಾಲನೆ ನೀಡುವಾಗ ನಮ್ಮ (ಜೆಡಿಎಸ್‌) ಕಾರ್ಯಕರ್ತರನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು’ ಎಂದು ಪಿಡಿಒಗಳಿಗೆ ಶಾಸಕ ಎಂ.ವಿ. ವೀರಭದ್ರಯ್ಯ ಸೂಚಿಸಿದರು.

ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕುಂದುಕೊರೆತೆ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನಲ್ಲಿ ಪ್ರತಿ ಗ್ರಾಮ ಪಚಾಯಿತಿಯಲ್ಲಿ ಸಾಮಾನ್ಯವರ್ಗದವರಿಗಾಗಿ 20 ಮನೆಗಳನ್ನು ವಸತಿ ಸಚಿವರನ್ನು ಕಾಡಿಬೇಡಿ ಮಂಜೂರು ಮಾಡಿಸುತ್ತೇನೆ. ಪಿಡಿಒಗಳು, ಆಡಳಿತಾಧಿಕಾರಿ ಯಾವುದೇ ರಾಜಕೀಯ ಮಾಡದೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ನಂತರ ಮೂರು ದಿನಗಳಲ್ಲಿ ನನಗೆ ಪತ್ರ ನೀಡಿದರೆ ಖಂಡಿತ ಮನೆಗಳನ್ನು ಮಂಜೂರು ಮಾಡಿಸುತ್ತೇನೆ ಎಂದರು

ಮಹಿಳೆಯೊಬ್ಬರು ಶಾಸಕರ ಬಳಿ ‘ಗ್ರಾಮ ಪಂಚಾಯಿತಿ ಸದಸ್ಯರ ಬಳಿ ಮನೆ ಕೇಳಿದರೆ, ಅವರು ₹ 10 ಸಾವಿರ
ದುಡ್ಡು ಕೇಳುತ್ತಾರೆ’ ಎಂದು ದೂರಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಾಸಕರು ‘ಈಗ ಅವರೆಲ್ಲ ಅಧಿಕಾರದಿಂದ ಇಳಿದು ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಮಗೆ ಬೇಕಾದ ವ್ಯಕ್ತಿಗೆ ಮತ ನೀಡಿ ಗೆಲ್ಲಿಸಿಕೊಳ್ಳಿ’ ಎಂದರು.

ಕೃಷಿ ನಿರ್ದೇಶಕ ಡಿ. ಹನುಮಂತರಾಯಪ್ಪ, ಇಒ ದೊಡ್ಡಸಿದ್ದಯ್ಯ, ಲೋಕೋಪಯೋಗಿ ಇಲಾಖೆ ಎಇಇ ಹೊನ್ನೇಶಪ್ಪ, ಪಿಡಿಒ ಕಾಂತರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಕೆ.ಸಿ. ನರಸರೆಡ್ಡಿ, ಮುಖಂಡರಾದ ಕೆ.ಪಿ. ಅಕ್ರಂ, ಹನುಮಂತರಾಯಪ್ಪ, ನಾಸೀರ್ ಉದ್ದೀನ್, ಕೆ.ಪಿ.ಶಫಿವುಲ್ಲಾ, ಜಯರಾಮೇಗೌಡ, ನರಸಿಂಹರೆಡ್ಡಿ, ಜಬೀವುಲ್ಲಾ, ತರಕಾರಿರಾಜು, ಮೈಲಾರಿ, ಸೇಠುಗಂಗಾಧರ್, ರಾಜು, ಲಕ್ಷ್ಮಿನರಸಿಂಹಯ್ಯ, ಡಿಸ್ ಲಕ್ಷ್ಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು