ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುಚ್ಚುಮದ್ದು ನೀಡಿದ ಪರಿಣಾಮ 2 ತಿಂಗಳ ಮಗು ಸಾವು; ಆಸ್ಪತ್ರೆ ಎದುರು ಪೋಷಕರ ಪ್ರತಿಭಟನೆ

Published 8 ಜೂನ್ 2023, 11:01 IST
Last Updated 8 ಜೂನ್ 2023, 11:01 IST
ಅಕ್ಷರ ಗಾತ್ರ

ಹುಳಿಯಾರು: ಚುಚ್ಚುಮದ್ದು ನೀಡಿದ ಪರಿಣಾಮ ಹೊಯ್ಸಳ ಕಟ್ಟೆ ಗ್ರಾಮದ ಎರಡು ತಿಂಗಳ ಮಗು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದ್ದು ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮನಹಳ್ಳಿ ಗ್ರಾಮದ ಮಧು ಎಂಬುವರ ಗಂಡು ಮಗುವನ್ನು ಮಾಮೂಲಿಯಂತೆ ನೀಡುವ ಚುಚ್ಚುಮದ್ದನ್ನು ಕೊಡಿಸಲು ಕೇಂದ್ರಕ್ಕೆ ಕರೆದೊಯ್ದಿದ್ದರು ಆದರೆ ಒಂದುವರೆ ತಿಂಗಳಿನಿಂದ ಎರಡು ತಿಂಗಳ ಒಳಗೆ ನೀಡುವ ಮೂರು ಚುಚ್ಚುಮದ್ದನ್ನು ನೀಡಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ದೂರಿದ್ದಾರೆ.

ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು ಆಗಮಿಸಿದ್ದಾರೆ. ಸದ್ಯಕ್ಕೆ ಕೇಂದ್ರದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸ್ಥಳದಲ್ಲಿ ಪೊಲೀಸರು ಮಕ್ಕ ಮೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT