ತುಮಕೂರು: ‘ಆನ್ಲೈನ್ ಟ್ರೇಡಿಂಗ್ ಮೇಲೆ ಹಣ ಹೂಡಿಕೆ ಹೆಚ್ಚಿನ ಲಾಭ ಗಳಿಸಬಹುದು’ ಎಂದು ನಂಬಿಸಿ ಉಪ್ಪಾರಹಳ್ಳಿಯ ಉದ್ಯಮಿ ಪಿ.ಶುಭಾ ಎಂಬುವರಿಗೆ ₹54.80 ಲಕ್ಷ ವಂಚಿಸಲಾಗಿದೆ.

ಇನ್ಸ್ಟಾಗ್ರಾಮ್ನಲ್ಲಿ ‘ಐಪಿಒ ಗುರು’ ಪೇಜ್ ಕ್ಲಿಕ್ ಮಾಡಿದ್ದು, ಅವರ ನಂಬರ್ ಅನ್ನು ಐಪಿಒ ವಾಟ್ಸ್ ಆ್ಯಪ್ ಗ್ರೂಪ್ಗೆ ಸೇರಿಸಿದ್ದಾರೆ. ಸದರಿ ಗ್ರೂಪ್ನಲ್ಲಿ ‘Pre IPO’, ‘Bulk Trade’ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಟ್ರೇಡಿಂಗ್ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ ಅಗತ್ಯ ದಾಖಲೆ ಸಲ್ಲಿಸಿ, ಟ್ರೇಡಿಂಗ್ ಖಾತೆ ತೆರೆದಿದ್ದಾರೆ.

ನ. 25ರಿಂದ ಡಿ. 19ರ ವರೆಗೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆ, ಯುಪಿಐ ಐ.ಡಿಗಳಿಗೆ ₹57.70 ಲಕ್ಷ ವರ್ಗಾವಣೆ ಮಾಡಿದ್ದಾರೆ. ನಂತರ ₹2.90 ಲಕ್ಷ ಹಿಂದಿರುಗಿಸಿದ್ದಾರೆ. ಅವರ ಟ್ರೇಡಿಂಗ್ ಖಾತೆಯಲ್ಲಿ ₹1.47 ಕೋಟಿ ಇರುವುದಾಗಿ ತೋರಿಸಿದೆ. ಹಣ ವಿತ್ ಡ್ರಾ ಮಾಡಿಕೊಳ್ಳುವುದಾಗಿ ಕೇಳಿದಾಗ ಆರೋಪಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಣ ವಿತ್ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.

ವಂಚನೆಗೆ ಒಳಗಾದ ವಿಷಯ ತಿಳಿದ ನಂತರ ಶುಭಾ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.