ಪಾವಗಡ: ‘ಕ್ಷೇತ್ರದಲ್ಲಿ ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಯಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ಚುನಾವಣಾಧಿಕಾರಿ ಅತೀಕ್ ಪಾಷ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಾವಗಡ ಕ್ಷೇತ್ರದಲ್ಲಿ ಒಟ್ಟು 1,92,087 ಮತದಾರರು ಇದ್ದಾರೆ. ಈ ಪೈಕಿ 98,489 ಪುರುಷರು, 93,588 ಮಹಿಳೆಯರು ಹಾಗೂ 10 ಇತರೆ ಮತದಾರರು ಇದ್ದಾರೆ ಎಂದು ತಿಳಿಸಿದರು.

2,830 ಅಂಚೆ ಮತದಾರರು, 80 ವರ್ಷ ಮೇಲ್ಪಟ್ಟವರು 3,917, ಮೊದಲ ಬಾರಿಗೆ ಮತ ಚಲಾಯಿಸಲಿರುವ 3,251 ಯುವ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಒಟ್ಟು 246 ಬೂತ್‌ಗಳಿದ್ದು, ಒಂದು ಅತಿಸೂಕ್ಷ್ಮ, 11 ಸೂಕ್ಷ್ಮ ಮತಗಟ್ಟೆ ಗುರುತಿಸಲಾಗಿದೆ ಎಂದು ತಿಳಿಸಿದರು.

ಸಂಚಾರ ತನಿಖಾ ತಂಡಗಳನ್ನು ರಚಿಸಿದ್ದು 24 ಗಂಟೆ ಕಾಲ ಗಸ್ತು ನಡೆಸಲಿವೆ. ತಾಲ್ಲೂಕಿನ ರಾಜವಂತಿ, ಕೊಡಮಡುಗು, ನಾಗಲಾಪುರ, ದೊಮ್ಮತಮರಿ, ಅರಸೀಕೆರೆ ಮತ್ತು ವೆಂಕಟಮ್ಮನಹಳ್ಳಿಯಲ್ಲಿ ತಪಾಸಣಾ ಕೇಂದ್ರ ತೆರೆಯಲಾಗಿದೆ. ಎಂದರು.

ಎಲ್ಲಾ ಕೇಂದ್ರದಲ್ಲಿಯೂ ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿಯನ್ನು ನೇಮಿಸಿದ್ದು ಕಟ್ಟುನಿಟ್ಟಿನ ಕ್ರಮವಹಿಸುವಂತೆ ಸೂಚಿಸಲಾಗಿದೆ ಎಂದು
ತಿಳಿಸಿದರು.

ಸಹಾಯಕ ಚುನಾವಣಾ ಧಿಕಾರಿಯಾದ ತಹಶೀಲ್ದಾರ್ ಕೆ.ಎನ್. ಸುಜಾತ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವಂತೆ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ (08136-200577). ಜಾತ್ರೆ, ಹಬ್ಬ, ರಾಜಕೀಯ ಸಮಾರಂಭಗಳಿಗೆ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.