ವೈ.ಎನ್. ಹೊಸಕೋಟೆಯಲ್ಲಿ ನಿರುಪಯುಕ್ತವಾಗಿರುವ ಕುಡಿಯುವ ನೀರಿನ ಟ್ಯಾಂಕ್
ವೈಎನ್ ಹೊಸಕೋಟೆ ಬಸ್ ನಿಲ್ದಾಣ
ವಿವಿಧೆಡೆಗಳಿಂದ ಬರುವ ಮಹಿಳೆಯರು ಮಕ್ಕಳಿಗೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಶುದ್ಧೀಕರಣ ಘಟಕ ಅಳವಡಿಸಿ ದಿನದ 24 ಗಂಟೆ ನೀರು ಸಿಗುವಂತೆ ಗಮನಹರಿಸಬೇಕು
ಮಂಜುನಾಥ್ ಮರಿದಾಸನಹಳ್ಳಿ
ವೈಎನ್ ಹೊಸಕೋಟೆ ಬಸ್ ನಿಲ್ದಾಣವನ್ನು ಅಭಿವೃದ್ಧಿ ಮಾಡಿ ಪ್ರಯಾಣಿಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ತಂಗುದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕು.
ರಘುನಂದನ್ ವಕೀಲ
ಇರುವ ಶೌಚಾಲಯಗಳ ಜೊತೆಗೆ ಹೆಚ್ಚನ ಶೌಚಾಲಯಗಳ ಅಗತ್ಯವಿದೆ. ರಾತ್ರಿ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಾಗಿ ನಿರ್ಭೀತಿಯಿಂದ ಕಾಯಲು ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಬೇಕು
ಶಿವಶಂಕರ್ ಓಬಳಾಪುರ
ಹೆಚ್ಚಿನ ಸಂಖ್ಯೆಯ ಬಸ್‌ಗಳು ಒಂದೇ ಸಮಯದಲ್ಲಿ ನಿಂತುಕೊಳ್ಳುವಂತೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕಿದೆ. ಆಸನ ನೆರಳಿನ ವ್ಯವಸ್ಥೆ ಹಾಗೂ ಸುಲಭವಾಗಿ ನಿಲ್ದಾಣದೊಳಗೆ ಪ್ರವೇಶಿಸುವಂತೆ ಅಗಲವಾದ ರಸ್ತೆ ನಿರ್ಮಿಸಬೇಕಿದೆ