ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಳಿಯಾರು ‌| ಸಾಕುಪ್ರಾಣಿ ಶೆಡ್‌ಗೆ ಬೆಂಕಿ: ₹22 ಲಕ್ಷ ಅಂದಾಜು ನಷ್ಟ

Published 12 ಡಿಸೆಂಬರ್ 2023, 13:21 IST
Last Updated 12 ಡಿಸೆಂಬರ್ 2023, 13:21 IST
ಅಕ್ಷರ ಗಾತ್ರ

ಹುಳಿಯಾರು: ರಾಮಘಟ್ಟ ಗ್ರಾಮದ ಎನ್.ಚೇತನ್‌ಕುಮಾರ್‌ ಅವರಿಗೆ ಸೇರಿದ ಸಾಕುಪ್ರಾಣಿಗಳ ಶೆಡ್‌ಗೆ ಸೋಮವಾರ ರಾತ್ರಿ ಬೆಂಕಿ ತಗುಲಿದೆ.

ಚೇತನ್‌ಕುಮಾರ್‌ ಅವರು ಗ್ರಾಮದ ಸಮೀಪದ ಸರ್ವೆ ನಂಬರ್‌ 84/4ರಲ್ಲಿ ಮೂರು ವರ್ಷಗಳಿಂದ ರಾಸು, ಕುರಿ, ಮೇಕೆ, ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಸೋಮವಾರ ರಾತ್ರಿ ಬೆಂಕಿ ತಗುಲಿ ನಾಲ್ಕು ಮಿಶ್ರತಳಿ ಹಸು, ಒಂದು ಹಳ್ಳಿಕಾರ್ ಹಸು, 100 ಕುರಿಗಳು, 10 ಮೇಕೆ, 150 ನಾಟಿಕೋಳಿ, ನಾಲ್ಕು ಬಾತುಕೋಳಿ, ನಾಲ್ಕು ಮೊಲ, ಒಂದು ಜರ್ಮನ್‌ ಶೆಫರ್ಡ್‌ ನಾಯಿ, ಚಾಪ್‌ ಕಟರ್‌, ಪೆಟ್ರೊಲ್‌ ವಾಟರ್‌ ಮಶಿನ್‌, ಪವರ್‌ ವೀಡ್‌ ಕಟರ್‌, ತೂಕದ ಯಂತ್ರ, ಫ್ರೆಜರ್‌ ವಾಷರ್‌, ಮೂರು ಕ್ವಿಂಟಲ್‌ ಹಿಂಡಿ, ಮೂರು ಕ್ವಿಂಟಲ್‌ ಜೋಳ, ಎಂಟು ಕ್ವಿಂಟಲ್‌ ಮೇವು ಸೇರಿದಂತೆ ಶೆಡ್‌ ಸಂಪೂರ್ಣ ಸುಟ್ಟು ಕರಕಲಾಗಿದೆ.

ಒಟ್ಟು ₹22 ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಹಂದನಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT