ಕಸಬ ಹೋಬಳಿಯ ಬೋರಲಿಂಗಯ್ಯಪಾಳ್ಯದ ನೇರಳೆಮರದಮ್ಮ ದೇವಾಲಯದ ಸಮೀಪದ ಶೆಡ್‌ನಲ್ಲಿ ಬೋರಲಿಂಗಯ್ಯನ ಪಾಳ್ಯದ ಕುಮಾರ್ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಡಿವೈಎಸ್ಪಿ ಲಕ್ಷ್ಮಿಕಾಂತ್ ಮಾರ್ಗದರ್ಶನದಲ್ಲಿ ಸಿಪಿಐ ಗುರುಪ್ರಸಾದ್ ಮತ್ತು ಸಿಬ್ಬಂದಿ ದಾಳಿ ನಡೆಸಿ 269 ಸಿಲಿಂಡರ್ ವಶಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಕುಮಾರ್ ಪರಾರಿಯಾಗಿದ್ದಾನೆ.