ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತೋವಿನಕೆರೆ | ರಸ್ತೆ ಬದಿ ಅಂಗಡಿ ಇಟ್ಟುಕೊಂಡು ಮಾರಾಟ ಮಾಡದಂತೆ ಪೊಲೀಸರ ಎಚ್ಚರಿಕೆ

Published 2 ಆಗಸ್ಟ್ 2024, 13:38 IST
Last Updated 2 ಆಗಸ್ಟ್ 2024, 13:38 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಪಿಡಿಒ ಪೊಲೀಸರೊಂದಿಗೆ ಶುಕ್ರವಾರ ರಸ್ತೆಬದಿ ಅಂಗಡಿ ಇಟ್ಟುಕೊಂಡು ಮಾರಾಟ ಮಾಡದಂತೆ ಜಾಗೃತಿ ಮೂಡಿಸಲು ರಸ್ತೆಗಿಳಿದಿದ್ದರು.

ಗ್ರಾಮದ ವೃತ್ತದಲ್ಲಿನ ಬಸ್ ನಿಲ್ದಾಣದಲ್ಲಿ ನಿತ್ಯ 30 ಬಸ್‌ ಸಂಚರಿಸುತ್ತವೆ. ಕಾರುಗಳನ್ನು ತಿರುಗಿಸಿಕೊಳ್ಳಲು ಅಗದ ಜಾಗದಲ್ಲಿ ಬಸ್‌ಗಳನ್ನು ತಿರುಗಿಸಿಕೊಳ್ಳುವಾಗ ಚಾಲಕರ ಕಷ್ಟ ಹೇಳತೀರದು. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು.

ಬೆಳಿಗ್ಗೆ 7 ಗಂಟೆಯಿಂದ 9ರ ವರೆಗೆ ತುಮಕೂರಿಗೆ ಹೋಗಲು ಸುಮಾರು 400 ವಿದ್ಯಾರ್ಥಿಗಳು ಇಲ್ಲಿ ಬಸ್‌ಗಾಗಿ ಕಾಯುತ್ತಿರುತ್ತಾರೆ. ಕಿರಿದಾದ ಜಾಗದಲ್ಲಿ ಬಸ್ ಬಂದು ತಿರುಗಿಸಿಕೊಳ್ಳುವಾಗ ಸೀಟ್ ಹಿಡಿಯಲು ಅವಸರದಲ್ಲಿ ಅನೇಕರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ.

‘ತೋವಿನಕೆರೆ ಬಸ್ ನಿಲ್ದಾಣದಲ್ಲಿರುವ ಅಂಗಡಿಗಳ ಮುಂದಿನ ರಸ್ತೆಯಲ್ಲಿ ಅಂಗಡಿ ಇಟ್ಟುಕೊಳ್ಳವವರ ಹಣ ವಸೂಲಿ ಮಾಡುವುದು ಹಲವು ದಶಕಗಳಿಂದ ನಡೆಯುತ್ತಿದೆ. ಕೆಲವು ಮುಖಂಡರು ಹಣ ನೀಡದೆ ತರಕಾರಿ, ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಅಂತಹವರ ಬೆಂಬಲ ಅಂಗಡಿಯವರಿಗೆ ಇದೆ’ ಎಂದು ದೂರುತ್ತಾರೆ ಸ್ಥಳೀಯರು.

ಈ ವೃತ್ತದಲ್ಲಿ ಕೆಲವು ರೈತರು ತರಕಾರಿ, ಹೂವು ಬೆಳದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರೆ, ಬೆಳೆಗಾರರ ಹೆಸರಿನಲ್ಲಿ ತುಮಕೂರು ಮಾರುಕಟ್ಟೆಯಿಂದ ತಂದು ಮಾರಾಟ ಮಾಡುವ ಮದ್ಯವರ್ತಿಗಳೇ ಹೆಚ್ಚು. ಭವಿಷ್ಯದಲ್ಲಿ ಆಗಬಹುದಾದ ಅವಘಡಗಳನ್ನು ತಪ್ಪಿಸಲು ಪೊಲೀಸ್‌ ಮತ್ತು ಪಂಚಾಯಿತಿ ದೃಡ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.

ಗ್ರಾಮದ ಶ್ರೀರಾಮ ದೇವಾಲಯದ ಮುಂದಿನ ಜಾಗದಲ್ಲಿ ವೀಳ್ಯದೆಲೆ ಹೂವು ತರಕಾರಿ ಮಾರಾಟಗಾರರಿಗೆ ಜಾಗ ನೀಡಿ ತಾತ್ಕಾಲಿಕ ವ್ಯವಸ್ಥೆ ಮಾಡುತ್ತೇವೆ.
ಗ್ರಾ.ಪಂ ಪಿಡಿಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT