ಚೇಳೂರು: ಟವರ್ ನಿರ್ಮಾಣ ಮತ್ತು ವಾಹಕ ಅಳವಡಿಕೆಗಾಗಿ ವಿದ್ಯುತ್ ವ್ಯತ್ಯಯವಾಗಿದ್ದರಿಂದ ಗ್ರಾಮದಲ್ಲಿ ಕುಡಿಯುವ ನೀರು ಇಲ್ಲದೆ ಪರದಾಡಿದರೆ, ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಕೆಗೂ ಅಡ್ಡಿಯಾಯಿತು.
ಆಗಸ್ಟ್ 7ರಿಂದ 25ರ ವರೆಗೆ ಬೆಳಿಗ್ಗೆ 10ರಿಂದ 5ರ ವರೆಗೆ ಬೆಳ್ಳಾವಿ, ಕೋರ, ಚೇಳೂರು ಸೇರಿದಂತೆ ಕೆಲವು ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಿರುವುದರಿಂದ ರೈತರು ದನಕರುಗಳಿಗೆ ನೀರಿಲ್ಲದೇ ಪರದಾಡಿದರೆ, ಶಾಲೆಗಳಲ್ಲಿ ಬಿಸಿಯೂಟಕ್ಕೂ ನೀರಿಲ್ಲದಂತಾಯಿತು.
ಮುಂದಿನ ದಿನಗಳಲ್ಲಿ ಪ್ರಕಟಣೆಯಂತೆ ಸಮಯ ನಿರ್ವಹಣೆ ಮಾಡದಿದ್ದಲ್ಲಿ ಇಲಾಖೆ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ರಾಮಕೃಷ್ಣಪ್ಪ, ಲೋಕೇಶ್, ಮೋಹನ್, ಮುರಳಿ, ರಮೇಶ್, ಮೋಹನ, ಮಂಜುನಾಥ್, ಗೋಪಾಲ್ ಎಚ್ಚರಿಸಿದ್ದಾರೆ.
ಪ್ರಕಟಣೆಯಲ್ಲಿ ತಿಳಿಸಿದಂತೆ ಸಮಯ ನಿರ್ವಹಣೆ ಮಾಡದಿರುವುದು ಇಂತಹ ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ಎಣ್ಣೆಕಟ್ಟೆ ಸಿದ್ಧಲಿಂಗಪ್ಪ ಆರೋಪಿಸಿದರು.