ಶುಕ್ರವಾರ, ಆಗಸ್ಟ್ 19, 2022
27 °C

‘ಪ್ರಜಾವಾಣಿ ನ್ಯೂಸ್ ಕ್ವಿಜ್’ ವಿಜೇತರಿಗೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಓದುಗರಲ್ಲಿ ಸಾಮಾನ್ಯ ಜ್ಞಾನ ಮತ್ತು ವಾಚನದ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ‘ಪ್ರಜಾವಾಣಿ’ಯು ಹಮ್ಮಿಕೊಂಡಿರುವ ‘ನ್ಯೂಸ್ ಕ್ವಿಜ್’ ಸ್ಪರ್ಧೆಯ ವಿಜೇತರಿಗೆ ನಗರದಲ್ಲಿ ಬಹುಮಾನವನ್ನು ವಿತರಿಸಲಾಯಿತು.

ನ.15ರಿಂದ ಈ ಸ್ಪರ್ಧೆ ಆರಂಭವಾಗಿದ್ದು ಡಿ.27ರವರೆಗೆ ನಡೆಯಲಿದೆ. ಪತ್ರಿಕೆಯಲ್ಲಿಯೇ ಬಂದ ಸುದ್ದಿ, ವರದಿ, ಲೇಖನ ಹೀಗೆ ವಿವಿಧ ವಿಚಾರಗಳ ಕುರಿತು ಸೋಮವಾರದಿಂದ ಶನಿವಾರದ ವರೆಗೆ ನಿತ್ಯ ಎರಡು ಪ್ರಶ್ನೆ ಹಾಗೂ ಭಾನುವಾರ ಐದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರಶ್ನೆಗಳಿಗೆ ಉತ್ತರ ನೀಡುವವರಲ್ಲಿ ಕೆಲವು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿ ಅವರಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ.

ತುಮಕೂರಿನ ಎಸ್‌ಐಟಿ ಬಡಾವಣೆಯ ಗಂಗಪ್ಪ, ಶ್ರೀದೇವಿನಗರದ ಪೂರ್ಣಚಂದ್ರ ಪ್ರಜ್ವಲ್, ಎಸ್‌ಐಟಿ 11ನೇ ಕ್ರಾಸ್‌ನ ಸಾತ್ವಿಕ್, ಡಿ.ಸಿ.ಪೃದ್ವಿಕ್, ಸೋಮೇಶ್ವರ ಪುರಂನ ಎಂ.ಎಸ್.ಶ್ರೀನಿವಾಸ್, ಈರಣ್ಣ, ಅಶೋಕ ನಗರದ ಎಂ.ಶ್ರೀಹರಿ, ಭಗೀರಥನಗರದ ಕೆ.ವಿ.ಮುದ್ದುವೀರಪ್ಪ, ಜ್ಯೋತಿನಗರದ ಎಚ್‌.ಎಂ.ಮದನ್, ಬೆಳಗುಂಬದ ಕಾಂತರಾಜು ಮತ್ತು ಕ್ಯಾತ್ಸಂದ್ರದ ಶ್ವೇತಾ ಅವರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಬಹುಮಾನಿತರೆಲ್ಲರೂ ಪತ್ರಿಕೆಯ ಬಗ್ಗೆ ಅಪಾರವಾದ ಮೆಚ್ಚುಗೆ ವ್ಯಕ್ತಪಡಿಸಿದರು.

‘13 ವರ್ಷದಿಂದ ಪತ್ರಿಕೆ ಓದುತ್ತಿದ್ದೇನೆ. ವಿಶ್ವಾಸಾರ್ಹತೆಯನ್ನು ಎಂದಿಗೂ ಕಳೆದುಕೊಂಡಿಲ್ಲ. ಗುಣಮಟ್ಟದ ಸುದ್ದಿಗಳು ಬರುತ್ತಿವೆ’ ಎಂದು ಕಾಂತರಾಜು ತಿಳಿಸಿದರು.

‘ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ನಿತ್ಯವೂ ಓದುವೆ. ಈ ಹಿಂದೆ ಪತ್ರಿಕೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿಯೂ ಬಹುಮಾನ ಗೆದಿದ್ದೇನೆ. ಪತ್ರಿಕೆ ಚೆನ್ನಾಗಿ ಬರುತ್ತಿದೆ. ಪೂರ್ಣಮಾಹಿತಿ ಇರುತ್ತದೆ’ ಎಂದು ಶ್ವೇತಾ ಹೇಳಿದರು.

‘ಕೆಎಎಸ್ ಸೇರಿದಂತೆ ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪ್ರಜಾವಾಣಿ ಓದಿದರೆ ಸಾಕು. ಐಎಎಸ್ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ವಾರಕ್ಕೆ ಒಮ್ಮೆ ಲೇಖನಗಳನ್ನು ನೀಡಿದರೆ ಅನುಕೂಲ ಎನ್ನುವರು ಶ್ರೀಹರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು