ಬುಧವಾರ, ಡಿಸೆಂಬರ್ 2, 2020
23 °C
ಚೇಳೂರು ತಾಲ್ಲೂಕು ಗಡಿ ಗುರುತಿಸುವಲ್ಲಿ ಜಿಲ್ಲಾಡಳಿತ ವಿಫಲ; ಆರೋಪ

ಚೇಳೂರು: 15ರಂದು ಕಪ್ಪು ಪಟ್ಟಿಯೊಂದಿಗೆ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಸಮ್ಮಿಶ್ರ ಸರ್ಕಾರ 2019 ಫೆಬ್ರುವರಿ 8 ರಂದು ಚೇಳೂರು ತಾಲ್ಲೂಕು ಎಂದು ಘೋಷಣೆ ಮಾಡಿ ಒಂದುವರೆ ವರ್ಷವಾದರೂ ಗಡಿ ಗುರುತು ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಹಾಗಾಗಿ ಆಗಸ್ಟ್ 15 ರಂದು ಚೇಳೂರು ನಾಡ ಕಚೇರಿ ಮುಂದೆ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಚೇಳೂರು ತಾಲ್ಲೂಕು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

ಚೇಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವ ಭಾವಿ ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿ ಪಿ.ರಾಧಾಕೃಷ್ಣ ಮಾತನಾಡಿ, ‘ಚೇಳೂರು ತಾಲ್ಲೂಕು ಎಂದು ಘೋಷಣೆಯಾದ ಕೆಲವೇ ದಿನಗಳ ನಂತರ ಸಮ್ಮಿಶ್ರ ಸರ್ಕಾರ ಪತನವಾಗುವ ಜತೆಗೆ ಜಿಲ್ಲಾಧಿಕಾರಿ ಸಹ ವರ್ಗಾವಣೆ ಆದರು. ನಂತರ ಬಂದ ಜಿಲ್ಲಾಧಿಕಾರಿಯೂ ಗಡಿ ಗುರುತಿಸಿಲ್ಲ’ ಎಂದು ದೂರಿದರು.

ಜಿಲ್ಲಾಡಳಿತದ ವಿಳಂಬ ನೀತಿಯ ವಿರುದ್ಧ ಸ್ವಾತಂತ್ರ್ಯ ದಿನಾಚರಣೆಯಂದು ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲು ತೀರ್ಮಾನಿಸಿದ್ದೇವೆ. ನಮ್ಮ ಹೋರಾಟಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ವಾಲ್ಮೀಕಿ ನಾಯಕ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಪಕ್ಷ, ಜಾತಿ ಬೇಧ ಮರೆತು ಎಲ್ಲ ವರ್ಗದ ಜನರು ಹಾಗೂ ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಒಗ್ಗಟ್ಟಾಗಿ ಕಪ್ಪು ಪಟ್ಟಿ ಧರಿಸಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕದ್ದೀಲು ವೆಂಕಟರವಣ ವಾಲ್ಮೀಕಿ ನಾಯಕ ಸಂಘದ ಮುಖಂಡ ಟಿ.ಎನ್.ಶೀನಪ್ಪ, ಚೇಳೂರು ತಾಲ್ಲೂಕು ಹೋರಾಟ ಸಮಿತಿ ಸದಸ್ಯ ಭೂಪಾಳಂ, ಜಗನ್ನಾಥಯ್ಯ ಶೆಟ್ಟಿ, ಜ್ಯೋ.ವೆಂ.ಚಲಪತಿ, ಕೆ.ವಿ.ಶ್ರೀನಿವಾಸರೆಡ್ಡಿ, ವೈ.ಶಂಕರಪ್ಪ, ಡಿ.ವೆಂಕಟರವಣ ಮತ್ತಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು