ಪಾವಗಡ: ತಾಲ್ಲೂಕಿನ ಕೋಡಿಗೆಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ತಿಪ್ಪೇಸ್ವಾಮಿ ಅವರನ್ನು ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಪೋಷಕರು ಶುಕ್ರವಾರ ಶಾಲೆ ಮುಂಭಾಗ ಪ್ರತಿಭಟನೆ ನಡೆಸಿದರು.

ಕಳೆದ ಹಲವು ವರ್ಷಗಳಿಂದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಬರುತ್ತಿದೆ. ಶೈಕ್ಷಣಿಕವಾಗಿ ಶಾಲೆ ಪ್ರಗತಿಯತ್ತ ಸಾಗುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರಾಂಶುಪಾಲರನ್ನು ಬೇರೆಡೆಗೆ ವರ್ಗವಾಣೆ ಮಾಡಿರುವುದು ಖಂಡನೀಯ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

ಗಡಿ ಪ್ರದೇಶದಲ್ಲಿರುವ ವಸತಿ ಶಾಲೆಯಲ್ಲಿ ಕಳಂಕ ರಹಿತ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಘದ ವ್ಯಾಪ್ತಿಯಲ್ಲಿಯೂ 2ನೇ ರ್ಯಾಂಕ್ ಪಡೆದಿದ್ದಾರೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ತುಂಬಾ ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದಲ್ಲದೆ ಅವರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಾರೆ ಎಂದು ಪೋಷಕ ಜಯಶೀಲರೆಡ್ಡಿ ತಿಳಿಸಿದರು.

ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲ ತಿಪ್ಪೇಸ್ವಾಮಿ ಅವರ ವರ್ಗಾವಣೆ ಆದೇಶವನ್ನು ಹಿಂಪಡೆಯುವವರೆಗೆ ಪ್ರತಿಭಟನೆ ನಡೆಸಲಾಗುವುದು. ಬೇಡಿಕೆ ಈಡೇರದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದುರ್ಗಣ್ಣ, ಡೈರಿ ಗಂಗಣ್ಣ, ಜಂಪಲಪ್ಪ, ಬಸವರಾಜು, ನಿಡಗಲ್ ಮಲ್ಲಣ್ಣ, ಕೆ ಟಿ ಹಳ್ಳಿ ಮಂಜುನಾಥ್, ವೀರನಾರಾಯಣ, ಕೆಂಚರಾಯ, ಪಾಲನಾಯಕ, ಗಿರಿಯಪ್ಪ, ನಟರಾಜ್, ನಿರಂಜನ್ , ರಘು, ಓಬಳೇಶ್, ಗಿರೀಶ್, ಕಾಂತರಾಜು, ಕವಿತಾ, ಸೋಮಶೇಖರ್, ರಾಜಮ್ಮ, ಹನುಮಂತರಾಯಪ್ಪ , ನಾಗಭೂಷಣ, ಪಾಲಪ್ಪ, ಗುಣೆಗೌಡ, ಸುಕನ್ಯಮ್ಮ, ಮಂಜುಳಾ, ನರೇಶ್ ಬಾಬು, ಮಂಜುನಾಥ್, ರಮೇಶ್, ಬಾಗ್ಯಲಕ್ಷ್ಮಿ, ಚಿತ್ತಯ್ಯ, ಈರಮುದ್ದಣ್ಣ , ಜಯರಾಮ, ಭಕ್ತೇಶ , ಗುಜ್ಜಾರಪ್ಪ, ಎಚ್. ರೆಡ್ಡಿ, ಈರಣ್ಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.