ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಗರಸಭೆ, ಪುರಸಭೆ ಅಧ್ಯಕ್ಷರ ಮೀಸಲಾತಿ ಪ್ರಕಟ

Published 6 ಆಗಸ್ಟ್ 2024, 16:41 IST
Last Updated 6 ಆಗಸ್ಟ್ 2024, 16:41 IST
ಅಕ್ಷರ ಗಾತ್ರ

ತುಮಕೂರು: ನಗರಾಭಿವೃದ್ಧಿ ಇಲಾಖೆಯು ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಪ್ರಕಟಿಸಿದೆ.

ಶಿರಾ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿದೆ. ತಿಪಟೂರು ನಗರಸಭೆ ಅಧ್ಯಕ್ಷ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ– ಸಾಮಾನ್ಯ. ಕುಣಿಗಲ್‌ ಪುರಸಭೆ ಅಧ್ಯಕ್ಷ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ– ಪರಿಶಿಷ್ಟ ಜಾತಿ. ಮಧುಗಿರಿ ಅಧ್ಯಕ್ಷ– ಸಾಮಾನ್ಯ, ಉಪಾಧ್ಯಕ್ಷ– ಸಾಮಾನ್ಯ ಮಹಿಳೆ. ಪಾವಗಡ ಅಧ್ಯಕ್ಷ– ಸಾಮಾನ್ಯ, ಉಪಾಧ್ಯಕ್ಷ–ಸಾಮಾನ್ಯ ಮಹಿಳೆ. ಚಿಕ್ಕನಾಯಕನಹಳ್ಳಿ ಅಧ್ಯಕ್ಷ– ಪರಿಶಿಷ್ಟ ಪಂಗಡ, ಉಪಾಧ್ಯಕ್ಷ– ಹಿಂದುಳಿದ ವರ್ಗ (ಬಿ).

ಪಟ್ಟಣ ಪಂಚಾಯಿತಿ: ತುರುವೇಕೆರೆ ಅಧ್ಯಕ್ಷ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ– ಪರಿಶಿಷ್ಟ ಜಾತಿ ಮಹಿಳೆ. ಕೊರಟಗೆರೆ ಅಧ್ಯಕ್ಷ– ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ– ಸಾಮಾನ್ಯ ಮಹಿಳೆ. ಹುಳಿಯಾರು ಅಧ್ಯಕ್ಷ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ– ಹಿಂದುಳಿದ ವರ್ಗ (ಎ) ಮಹಿಳೆ. ಗುಬ್ಬಿ ಅಧ್ಯಕ್ಷ– ಸಾಮಾನ್ಯ ಮಹಿಳೆ, ಉಪಾಧ್ಯಕ್ಷ– ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT