ತುಮಕೂರು: ಬೆಂಬಲ ಬೆಲೆಯಲ್ಲಿ ಕೊಬ್ಬರಿ ಖರೀದಿಸಲು ರೈತರ ನೋಂದಣಿ ಪ್ರಕ್ರಿಯೆ ಮುಗಿದಿದ್ದರೂ ಇನ್ನೂ ಖರೀದಿ ಆರಂಭವಾಗಿಲ್ಲ. ‘ನೋಂದಣಿ ಅಕ್ರಮ’ ಸಾಕಷ್ಟು ಸದ್ದು ಮಾಡುತ್ತಿದ್ದು, ಮತ್ತಷ್ಟು ತಡವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಫೆ. 5ರಂದು ನೋಂದಣಿಗೆ ಚಾಲನೆ ನೀಡಿದ್ದು, ಫೆ. 9ಕ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನೋಂದಣಿ ಕೆಲಸ ಮುಗಿದು ನಾಲ್ಕು ದಿನಗಳು ಕಳೆದಿದ್ದರೂ ಖರೀದಿಗೆ ಆರಂಭಿಸಬೇಕೆ? ಬೇಡವೆ? ಎಂಬ ಗೊಂದಲದಲ್ಲಿ ನಾಫೆಡ್ ಅಧಿಕಾರಿಗಳು ಇದ್ದಾರೆ.

ನೋಂದಣಿ ಸಮಯದಲ್ಲಿ ಅಕ್ರಮ ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು. ಖಾಸಗಿ ವ್ಯಕ್ತಿಗಳಿಗೆ ಲಾಗಿನ್ ಐಡಿ, ಪಾಸ್‌ವರ್ಡ್ ಕೊಟ್ಟು ನೋಂದಣಿ ಕೇಂದ್ರದ ಹೊರಗೆ ಹೆಸರು ನೋಂದಣಿ ಮಾಡಲಾಗಿದೆ ಎಂದು ರೈತರು ಹಾಗೂ ರೈತ ಸಂಘಟನೆಗಳು ಆರೋಪಿಸಿದ್ದವು. ಅಕ್ರಮದ ಬಗ್ಗೆ ತನಿಖೆ ನಡೆಸಬೇಕು. ಈಗ ಮಾಡಿರುವ ನೋಂದಣಿ ರದ್ದುಪಡಿಸಿ ಹೊಸದಾಗಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವೆ ನೋಂದಣಿ ಕೇಂದ್ರದ ಹೊರಗೆ ಮಾಡಿರುವ ನೋಂದಣಿಯನ್ನಾದರೂ ರದ್ದುಪಡಿಸಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ದಲ್ಲಾಳಿಗಳು, ವರ್ತಕರು, ರವಾನೆದಾರರು ರೈತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ರೈತರಿಂದ ಕಡಿಮೆ ಬೆಲೆಗೆ ಕೊಬ್ಬರಿ ಖರೀದಿಸಿ ದಾಸ್ತಾನು ಮಾಡಿದ್ದು, ಅದನ್ನು ನಾಫೆಡ್ ಕೇಂದ್ರಗಳ ಮೂಲಕ ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿದ್ದರು.

ನೋಂದಣಿಯಲ್ಲಿ ಅಕ್ರಮ ಹಾಗೂ ಕೊಬ್ಬರಿ ಖರೀದಿ ಮಿತಿಯನ್ನು ಹೆಚ್ಚಿಸುವಂತೆ ಆಗ್ರಹಿಸಿ ರೈತ ಸಂಘಟನೆ ಫೆ. 15ಕ್ಕೆ ತುಮಕೂರು ನಗರ ಬಂದ್‌ಗೆ ಕರೆ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ಕಡೆಯಿಂದ ಸ್ಪಷ್ಟ ನಿರ್ದೇಶನ ಬಾರದೆ ಅಧಿಕಾರಿಗಳು ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ. ರೈತರು ಮತ್ತಷ್ಟು ದಿನಗಳ ಕಾಲ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಬ್ಬರಿ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದರಿಂದ ಕಳೆದ ನಾಲ್ಕೈದು ತಿಂಗಳಿಂದಲೂ ನಾಫಡ್ ಖರೀದಿ ಕೇಂದ್ರ ತೆರೆಯುವಂತೆ ರೈತರು ಒತ್ತಾಯಿಸುತ್ತಲೇ ಬಂದಿದ್ದರು. ಡಿಸೆಂಬರ್‌ನಲ್ಲೇ ಆರಂಭಿಸುವ ಭರವಸೆ ಕೇಂದ್ರ ಸರ್ಕಾರದಿಂದ ಸಿಕ್ಕಿತ್ತು. ಆದರೆ ಜಾರಿಗೆ ಬರಲಿಲ್ಲ. ರೈತರ ಒತ್ತಡ ಹೆಚ್ಚಿದ್ದರಿಂದ ಕೊನೆಗೂ ಒಪ್ಪಿಗೆ ನೀಡಲಾಯಿತು. ಜ. 20ರಿಂದಲೇ ನೋಂದಣಿ, ಖರೀದಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಜಿಲ್ಲಾ ಆಡಳಿತ ಹೇಳಿತ್ತು. ನೋಂದಣಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದಿದ್ದರಿಂದ ಮತ್ತಷ್ಟು ತಡವಾಗಿತ್ತು. ಜ. 24ರಂದು ಖರೀದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದ್ದರೂ ಆರಂಭವಾಗಿರಲಿಲ್ಲ. ಮತ್ತೆ ಫೆ. 1ಕ್ಕೆ ಮುಂದೂಡಲಾಗಿತ್ತು. ಕೊನೆಗೆ ಫೆ. 5ರಂದು ನೋಂದಣಿ ಪ್ರಾರಂಭಿಸಲಾಗಿತ್ತು.

Cut-off box - ಇಳುವರಿ ಕುಸಿತ ಕಳೆದ ಆರು ತಿಂಗಳ ಹಿಂದೆಯೇ ಮಾರಾಟ ಮಾಡಬೇಕಿದ್ದ ಕೊಬ್ಬರಿಯನ್ನು ಹಾಗೆಯೇ ಇಟ್ಟುಕೊಂಡಿದ್ದು ಇಳುವರಿ ಕುಸಿತದ ಆತಂಕ ರೈತರನ್ನು ಕಾಡುತ್ತಿದೆ. ದಿನಗಳು ಕಳೆದಂತೆ ತೂಕ ಕಡಿಮೆಯಾಗಲಿದೆ. ಕೊಬ್ಬರಿ ಒಣಗಿದಂತೆ ಅದರಲ್ಲಿರುವ ಎಣ್ಣೆ ಅಂಶ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಕೊಬ್ಬರಿ ತೂಕ ಕಳೆದುಕೊಂಡು ನಷ್ಟ ಅನುಭವಿಸಬೇಕಾಗುತ್ತದೆ. ಸರಿಯಾದ ಬೆಲೆಯೂ ಸಿಗದೆ ತೂಕವೂ ಇಳಿಕೆಯಾದರೆ ನಷ್ಟದ ಪ್ರಮಾಣ ದುಪ್ಪಟ್ಟಾಗುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 15199 ರೈತರು ನೋಂದಾಯಿಸಿದ್ದು 2.10 ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.