ಸಿಡಿಲು: 2 ಮನೆ ಚಾವಣಿ ಕುಸಿತ

ಶುಕ್ರವಾರ, ಮೇ 24, 2019
33 °C

ಸಿಡಿಲು: 2 ಮನೆ ಚಾವಣಿ ಕುಸಿತ

Published:
Updated:
Prajavani

ವೈ.ಎನ್.ಹೊಸಕೋಟೆ: ಮಂಗಳವಾರ ರಾತ್ರಿ ಈ ಬಾಗದ ಸುತ್ತಮುತ್ತ ಭಾರಿ ಗಾಳಿ ಮಳೆಯಾಗಿದ್ದು, ಇಂದ್ರಬೆಟ್ಟ ಗ್ರಾಮದ ಎರಡು ಮನೆಗಳಿಗೆ ಸಿಡಿಲು ಬಡಿದು ಚಾವಣಿ ಕುಸಿದಿದೆ.

ಗಂಗಪ್ಪ ಮತ್ತು ದುರ್ಗಪ್ಪ ಅವರ ಮನೆಗಳು ಅಕ್ಕಪಕ್ಕದಲ್ಲಿವೆ. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ಗಾಳಿ ಮಳೆ ಪ್ರಾಂಭವಾಯಿತು. ದಿಢೀರನೆ ಮನೆಯ ಚಾವಣಿಗಳಿಗೆ ಸಿಡಿಲು ಬಡಿದಿದೆ. ಸಿಮೆಂಟ್ ಶೀಟುಗಳು ಪುಡಿಪುಡಿಯಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ಮನೆಯಲ್ಲಿ ಮಲಗಿದ್ದ ಗಂಗಪ್ಪ, ರಮೇಶ, ಅಮೃತವಾಣಿ ಮತ್ತು 6 ತಿಂಗಳ ಹಸುಗೂಸಿನ ಮೇಲೆ ಶೀಟುಗಳು ಬಿದ್ದಿದ್ದರಿಂದ ಗಾಯಗಳಾಗಿವೆ. ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸಿಡಿಲಿನ ರಭಸಕ್ಕೆ ಒಂದೆರಡು ಗೋಡೆ ಬಿರುಕು ಬಿಟ್ಟಿವೆ. ಮನೆಯಲ್ಲಿದ್ದ ಟಿ.ವಿ ಮತ್ತು ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳು, ಮಂಚ, ಅಲ್ಮೆರಾ, ಪ್ಯಾನ್ ಜಖಂಗೊಂಡಿವೆ. ಮಳೆಯ ನೀರಿನಿಂದ ಧವಸಧಾನ್ಯ ಹಾಳಾಗಿದೆ.

ಈ ಮನೆಗಳ ಹಿಂದೆ ಸ್ಪಲ್ವ ದೂರದಲ್ಲಿದ್ದ ಸರಿತಾ ಅವರ ಮನೆಯ ಕಿಟಕಿಯ ಮೂಲಕ ಸಿಡಿಲಿನ ಕಿಡಿಗಳು ಒಳತೂರಿ ಅಲ್ಮೆರಾದಲ್ಲಿದ್ದ ಬಟ್ಟೆಗಳು, ಮಕ್ಕಳ ಆಟಿಕೆಗಳು ಸುಟ್ಟಿವೆ.

ಗ್ರಾಮಲೆಕ್ಕಿಗ ಯಮುಲಪ್ಪಗೌಡ ಬಿರದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !