ಶನಿವಾರ, ಸೆಪ್ಟೆಂಬರ್ 25, 2021
26 °C

ಕೊರಟಗೆರೆ ತಾಲ್ಲೂಕಿನ ಹೊನ್ನಾರನಹಳ್ಳಿ ಗ್ರಾಮ: ಬಿರುಗಾಳಿಗೆ ಬಾಳೆ ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರಟಗೆರೆ: ಬಿರುಗಾಳಿಯಿಂದಾಗಿ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾರನಹಳ್ಳಿ ಗ್ರಾಮದ ರೈತ ಜೋಗಪ್ಪ ಅವರ ಬಾಳೆ ತೋಟ ನಾಶವಾಗಿದೆ.

ಬಿರುಗಾಳಿ ರಭಸಕ್ಕೆ ಇಬ್ಬರು ರೈತರ ಮನೆಯ ಮೇಲಿನ ಶೀಟ್‌ಗಳು ಕೂಡ ಹಾರಿ ಹೋಗಿವೆ. ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾರನಹಳ್ಳಿ (ರಾಜಯ್ಯನಪಾಳ್ಯ) ಗ್ರಾಮದ ರೈತ ಜೋಗಪ್ಪ ಎಂಬುವರ 1 ಎಕರೆ 20 ಗುಂಟೆ ಬಾಳೆ ತೋಟದಲ್ಲಿ 600ಕ್ಕೂ ಹೆಚ್ಚು ಬಾಳೆಗಿಡಗಳು ಬಿರುಗಾಳಿಯಿಂದ ನಾಶವಾಗಿವೆ. ₹ 60 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ. ಇದೇ ಗ್ರಾಮದ ನಾಗಣ್ಣ ಎಂಬುವರ ಮನೆಯ 3 ಶೀಟ್‌ಗಳು ಗಾಳಿಗೆ ಹಾರಿಹೋಗಿವೆ.

ಕೈಸಾಲ ಮತ್ತು ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ಕೊಳವೆಬಾವಿ ಕೊರೆಯಿಸಿ 6 ತಿಂಗಳ ಹಿಂದೆ ಬಾಳೆ ಗಿಡ ನೆಟ್ಟಿದ್ದೆವು. ಮಳೆ ಮತ್ತು ಬಿರುಗಾಳಿಯಿಂದ ಫಸಲಿಗೆ ಬಂದಿದ್ದ ಬೆಳೆ ನಾಶವಾಗಿದೆ. 15ರಿಂದ 30 ದಿನಗಳಲ್ಲಿ ಬಾಳೆ ಕಟಾವು ಮಾಡಬೇಕಿತ್ತು. ಆದರೀಗ ಬಿರುಗಾಳಿಯಿಂದ ನಾಶವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ರೈತ ಜೋಗಪ್ಪ ಅಳಲು ತೋಡಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು