ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಭವನ ಚಲೋ ಪಾದಯಾತ್ರೆಗೆ ಬೆಂಬಲ

Published 1 ಅಕ್ಟೋಬರ್ 2023, 14:58 IST
Last Updated 1 ಅಕ್ಟೋಬರ್ 2023, 14:58 IST
ಅಕ್ಷರ ಗಾತ್ರ

ಚೇಳೂರು: ಗ್ರಾಮದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭಾನುವಾರ ಬೆಳಿಗ್ಗೆ ಕರಪತ್ರ ಹಂಚಿ ತೆಂಗು ಮತ್ತು ಕೊಬ್ಬರಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಅಕ್ಟೋಬರ್ 3ರಂದು ಬೆಂಗಳೂರು ರಾಜಭವನ ಚಲೋ ಸಂಬಂಧ ಗುಬ್ಬಿ ತಾಲ್ಲೂಕಿನ ಪ್ರಚಾರ ಭಾಗವಾಗಿ ಪಾದಯಾತ್ರೆ ನಡೆಸಲಾಯಿತು.

ಪಾದಯಾತ್ರೆಯಲ್ಲಿ ಕೊಬ್ಬರಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರ ₹20 ಸಾವಿರ ಬೆಂಬಲ ಬೆಲೆ ಹಾಗೂ ರಾಜ್ಯ ಸರ್ಕಾರ ಐದು ಸಾವಿರ ಸಹಾಯಧನ ನೀಡಬೇಕು ಸೇರಿದಂತೆ ಬೇಡಿಕೆಗಳ ಕರಪತ್ರವನ್ನು ಹಂಚಿ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ರಾಜಭವನ ಚಲೋ ಚಳವಳಿಯಲ್ಲಿ ಭಾಗವಹಿಸಿಸುವಂತೆ ವಿನಂತಿಸಲಾಯಿತು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ, ತಾಲ್ಲೂಕು ಕಾರ್ಯದರ್ಶಿ ಬಸವರಾಜು, ರೈತ ಸಂಘದ ಮುಖಂಡ ನಂಜುಂಡಪ್ಪ, ನಾಗರಾಜು, ದಯಾನಂದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT