ತುಮಕೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಪ್ರಯುಕ್ತ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿನ ವಿವಿಧ ದೇಗುಲಗಳಲ್ಲಿ ಪೂಜೆ ನೆರವೇರಿದವು. ಪಾನಕ, ಪ್ರಸಾದ ವಿತರಣೆ ಜರುಗಿತು. ಎಲ್ಲೆಡೆ ರಾಮನಾಮ ಸ್ಮರಣೆ ಮೊಳಗಿತು. ಅಯೋಧ್ಯೆ ರಾಮನ ಭಿತ್ತಿಚಿತ್ರಗಳುದೇಗುಲಗಳ ಬಳಿ ರಾರಾಜಿಸಿದವು.

ಕೇವಲ ನಗರ ಪ್ರದೇಶಗಳಷ್ಟೇ ಅಲ್ಲದೆ ಹಳ್ಳಿ ಹಳ್ಳಿಗಳಲ್ಲಿಯೂ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮವನ್ನು ಸಂಭ್ರಮಿಸಲಾಯಿತು.

ನಗರದ ಕೆ.ಆರ್.ಬಡಾವಣೆಯ ರಾಮದೇವರ ದೇಗುಲ, ಶೆಟ್ಟಿಹಳ್ಳಿಯ ಆಂಜನೇಯ ದೇವಸ್ಥಾನ, ಬಟವಾಡಿ ಆಂಜನೇಯ, ಬಿ.ಎಚ್.ರಸ್ತೆಯ ಆಂಜನೇಯ, ಕೋಟೆ ಆಂಜನೇಯ ಸ್ವಾಮಿ– ಹೀಗೆ ಹಲವು ದೇಗುಲಗಳಲ್ಲಿ ಬೆಳಿಗ್ಗೆಯೇ ವಿಶೇಷ ಪೂಜೆಗಳು ನೆರವೇರಿದವು. ದೇವರ ವಿಗ್ರಹಗಳಿಗೆ ಅಲಂಕಾರ ಮಾಡಲಾಗಿತ್ತು. ರಾಮ ಮತ್ತು ಆಂಜನೇಯ ದೇಗುಲಗಳಲ್ಲದೆ ಇತರೆ ದೇಗುಲಗಳಲ್ಲಿಯೂ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ರಾಮಭಕ್ತರು, ವಿಶ್ವಹಿಂದೂ ಪರಿಷತ್, ಬಜರಂಗದಳ, ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ದೇಗುಲಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾನಕ, ಪ್ರಸಾದ ವಿತರಿಸಿದರು. ಹಬ್ಬದ ಆಚರಣೆಯಂತೆ ಸಂಭ್ರಮಿಸಿದರು. ಜೈ ಶ್ರೀರಾಮ್ ಘೋಷಣೆಗಳು ಮುಗಿಲು ಮುಟ್ಟಿದ್ದವು. ಬಹುತೇಕ ದೇಗುಲಗಳ ಬಳಿ ರಾಮದೇವರ ದೊಡ್ಡ ಭಿತ್ತಿಚಿತ್ರಗಳನ್ನು ಅಳವಡಿಸಲಾಗಿತ್ತು.

ಪೊಲೀಸ್ ಭದ್ರತೆ

ತುಮಕೂರು ನಗರ ಸೇರಿದಂತೆ ತಾಲ್ಲೂಕು ಕೇಂದ್ರಗಳು ಹಾಗೂ ದೊಡ್ಡ ಗ್ರಾಮಗಳಲ್ಲಿರುವ ಪ್ರಾಥನಾ ಮಂದಿರಗಳ ಬಳಿ ಪೊಲೀಸರು ಭದ್ರತೆ ಕೈಗೊಂಡಿದ್ದರು. ಬೆಳಿಗ್ಗೆಯೇ ಪ್ರಾರ್ಥನಾ ಮಂದಿರಗಳ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಕೇಂದ್ರದಿಂದ ವಿವಿಧ ಕಡೆಗಳಿಗೆ ಕೆಎಸ್ಆರ್ಪಿ ತುಕಡಿಗಳನ್ನು ಕಳುಹಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.