ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ನಗರದ ತುಂಬ ಗಣತಂತ್ರದ ಘಮ

Last Updated 27 ಜನವರಿ 2020, 11:06 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ 71ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳು, ಸಂಘ–ಸಂಸ್ಥೆಗಳು, ರಾಜಕೀಯ ಪಕ್ಷಗಳ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಭ್ರಮದ ಖುಷಿಯಲ್ಲಿ ಸಿಹಿಯನ್ನು ಸಹ ಹಂಚಲಾಯಿತು. ಡಾ.ಬಿ.ಆರ್‌.ಅಂಬೇಡ್ಕರ್‌, ಮಹಾತ್ಮ ಗಾಂಧೀಜಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.

ತುಮಕೂರಿನ ಎಂ.ಜಿ.ರಸ್ತೆಯ ಬದಿಯ ವ್ಯಾಪಾರಿಗಳು ಗಣರಾಜ್ಯೋತ್ಸವದ ಅಂಗವಾಗಿ ಡಾ.ಬಿ.ಆರ್‌.ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ಮಾಡಿದರು. ಉಪಮೇಯರ್ ರೂಪಶ್ರೀ, ಪಾಲಿಕೆ ಸದಸ್ಯ ಮಹೇಶ್, ನಯಾಜ್ ಅಹಮದ್, ಸರ್ದಾರ್ ಪಾಷ, ರಘು, ನೂರು, ಸಲೀಂ ಪಾಷ, ವಸೀಂ ಅಕ್ರಂ, ಮುತ್ತುರಾಜ್, ಸುಲ್ತಾನ್ ಇದ್ದರು.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ನ ಜಿಲ್ಲಾ ಘಟಕಗಳ ಕಚೇರಿ ಆವರಣದಲ್ಲಿ ಮುಖಂಡರು ಧ್ವಜಾರೋಹಣ ಮಾಡಿ, ದೇಶಾಭಿಮಾನದ ಮಾತುಗಳನ್ನು ಆಡಿ
ದರು. ಮಹಾನಗರ ಪಾಲಿಕೆ ಆವರಣ
ದಲ್ಲಿ ಸಹ ಹಬ್ಬದ ಸಂಭ್ರಮ ಇತ್ತು. ಸಿದ್ಧಗಂಗಾ ಮಠದಲ್ಲೂ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರೀಯ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳು, ಶ್ರೀದೇವಿ ಕಾಲೇಜು, ಸಿದ್ಧಗಂಗಾ ತಾಂತ್ರಿಕ ಕಾಲೇಜು, ಉಮಾಮಹೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲೂ ಗಣತಂತ್ರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ತುಮಕೂರು ಜಾಯಿಂಟ್‌ ಆ್ಯಕ್ಷನ್‌ ಕಮಿಟಿ ಪುರಭವನ ಮುಂಭಾಗ ಗಣತಂತ್ರ ದಿನ ಆಚರಿಸಿತು. ಸ್ಲಂ ಜನಾಂದೋಲನ ಸಮಿತಿಯು ಸಂವಿಧಾನದ ಪ್ರತಿಗೆ ಗೌರವ ಸೂಚಿಸಿತು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಾದ ಹಂಚಾಟೆ ಸಂಜೀವ್‌ಕುಮಾರ್‌ ಧ್ವಜಾರೋಹಣ ಮಾಡಿದರು. ಕನ್ನಡ ಭವನದಲ್ಲೂ ರಾಷ್ಟ್ರೀಯ ಹಬ್ಬ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT