ತುಮಕೂರು: ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಖಂಡಿಸಿ ನಗರದ ಟೌನ್ಹಾಲ್ ಬಳಿ ಶನಿವಾರ ಸಂಜೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ಹುಬ್ಬಳ್ಳಿಯಲ್ಲಿ ದಲಿತ ಹುಡುಗನ ಮದುವೆಯಾದ ಕಾರಣಕ್ಕೆ ಮಗಳನ್ನು ತಂದೆಯೇ ಕೊಲೆ ಮಾಡಿದ್ದಾನೆ. ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ದಾಳಿ ನಿಲ್ಲುತ್ತಿಲ್ಲ. ಭಾರತದಲ್ಲಿ ಕ್ರಿಸ್ಮಸ್ ಸಮಯದಲ್ಲಿ ಚರ್ಚ್, ಇತರೆ ಕಡೆಗಳಲ್ಲಿ ದಾಳಿಗಳು ನಡೆಯುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ. ಇದನ್ನು ಸಹಿಸಿ ಮೌನವಾಗಿದ್ದರೆ ನಾಳೆ ಕೊಲೆಗಡುಕರ ಸಮಾಜ ನಿರ್ಮಾಣವಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಬೇಕು. ಕೊಲ್ಲುವ ಪ್ರವೃತ್ತಿ ತಡೆಯುವುದು ಸರ್ಕಾರದ ಕೆಲಸ’ ಎಂದು ಚಿಂತಕ ಕೆ.ದೊರೈರಾಜ್ ಹೇಳಿದರು.

ಪರಿಸರವಾದಿ ಸಿ.ಯತಿರಾಜು, ‘ಜೀವಪರರು ಮತ್ತಷ್ಟು ಹೆಚ್ಚಾಗಬೇಕು. ಅನ್ಯಾಯ, ದಬ್ಬಾಳಿಕೆ ವಿರುದ್ಧ ಪ್ರತಿಭಟಿಸಬೇಕು’ ಎಂದರು.

ಲೇಖಕಿ ಬಾ.ಹ.ರಮಾಕುಮಾರಿ, ‘ಸಮಾಜದ ಒಂದು ವರ್ಗ ಹಿಂಸೆಯನ್ನು ಬೆಂಬಲಿಸುತ್ತಿರುವುದು ನಾಗರಿಕ ಸಮಾಜವನ್ನು ಆತಂಕಕ್ಕೆ ತಳ್ಳಿದೆ. ಇಂತಹ ಬೆಳವಣಿಗೆ ವಿರುದ್ಧ ಧ್ವನಿ ಎತ್ತಬೇಕು’ ಎಂದು ತಿಳಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಸೈಯದ್ ಮುಜೀಬ್, ಅನುಪಮಾ, ಕೊಟ್ಟ ಶಂಕರ್, ತಾಜುದ್ದೀನ್, ಬಿ.ಉಮೇಶ್, ರಂಗಧಾಮಯ್ಯ, ಎನ್.ಕೆ.ಸುಬ್ರಮಣ್ಯ, ಪಿ.ಎನ್.ರಾಮಯ್ಯ, ಮೆಳೇಹಳ್ಳಿ ದೇವರಾಜು, ಇನ್ಸಾಫ್ ರಫೀಕ್, ಟಿ.ಆರ್.ಕಲ್ಪನಾ, ಕಿಶೋರ್, ಅಪ್ಸರ್ ಖಾನ್, ವಸೀಮ್ ಅಕ್ರಮ್, ಅಶ್ವತ್ಥಪ್ಪ, ಚಂದ್ರಶೇಖರ್, ಟಿ.ಜಿ.ಶಿವಲಿಂಗಯ್ಯ, ಅರುಣ್, ಕೆನಡಿ, ಕೃಷ್ಣಮೂರ್ತಿ, ಪಲ್ಲವಿ, ಶಂಕರಪ್ಪ ಮೊದಲಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.