ತುಮಕೂರು: ತಾಲ್ಲೂಕಿನ ವಿವಿಧೆಡೆ ಸೋಮವಾರ ಸಂಜೆ ಮತ್ತು ರಾತ್ರಿ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಕೋರ ಠಾಣಾ ವ್ಯಾಪ್ತಿಯ ತಿಮ್ಮರಾಜನಹಳ್ಳಿಯಲ್ಲಿ ಕಾರು ಡಿಕ್ಕಿಯಾಗಿ ಅದೇ ಗ್ರಾಮದ ರಂಗಮ್ಮ (65) ಮೃತಪಟ್ಟಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿಯಾಗಿದೆ.

ರಂಗಾಪುರದ ಬಳಿ ಲಾರಿಗೆ ಆಟೊ ಡಿಕ್ಕಿಯಾಗಿ ಆಟೊದಲ್ಲಿದ್ದ ನವೀನ್ (18) ಸಾವನ್ನಪ್ಪಿದ್ದಾರೆ. ಅಂತರಸನಹಳ್ಳಿಯ ನವೀನ್ ಊರುಕೆರೆಯಿಂದ ನಗರದ ಕಡೆಗೆ ಬರುವಾಗ ಘಟನೆ ನಡೆದಿದೆ.

ಕಿತ್ತಗಾನಹಳ್ಳಿಯಲ್ಲಿ ಮನೆಯ ಮಾಳಿಗೆಯಿಂದ ಬಟ್ಟೆ ತೆಗೆದುಕೊಂಡು ಕೆಳಗೆ ಇಳಿಯುವಾಗ ಏಣಿ ಸಮೇತ ಬಿದ್ದು, ಪುಷ್ಪಲತಾ (39) ಸಾವನ್ನಪ್ಪಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭೀಮಸಂದ್ರದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ 35 ವರ್ಷದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.