ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗೆ ಲೈಂಗಿಕ ಕಿರುಕುಳ, ಬ್ಲ್ಯಾಕ್‌ಮೇಲ್‌; ವಕೀಲನ ವಿರುದ್ಧ ಪ್ರಕರಣ

Published 30 ಏಪ್ರಿಲ್ 2024, 14:35 IST
Last Updated 30 ಏಪ್ರಿಲ್ 2024, 14:35 IST
ಅಕ್ಷರ ಗಾತ್ರ

ತುಮಕೂರು: ಕಾರ್ಮಿಕ ಇಲಾಖೆ ಮಹಿಳಾ ಅಧಿಕಾರಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿ, ಅಶ್ಲೀಲ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇರೆಗೆ ವಕೀಲ ರಾಜೇಶ್‌ ಅಲಿಯಾಸ್‌ ದೊಡ್ಡರಾಜು ಎಂಬುವರ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ತೋರಿಸಿ ಬ್ಲ್ಯಾಕ್‌ ಮಾಡುತ್ತಿದ್ದಾರೆ’ ಎಂದು ಅಧಿಕಾರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

‘ಭೂ ಸ್ವತ್ತಿಗೆ ಸಂಬಂಧಿಸಿದಂತೆ ಶಂಕರಪ್ಪ ಎಂಬ ಡೆವಲಪರ್‌ ಮತ್ತು ರಾಜೇಶ್‌ ಸೇರಿಕೊಂಡು ನನ್ನ ಪತಿ ಹೆಸರಿನಲ್ಲಿ ಅಗ್ರಿಮೆಂಟ್‌ ಮಾಡಿ ನನಗೆ ವಂಚಿಸುವ ಹುನ್ನಾರ ನಡೆಸಿದ್ದಾರೆ. ಇದನ್ನು ವಿರೋಧಿಸಿದ್ದಕ್ಕೆ ಏ. 29ರಂದು ಉದ್ದೇಶ ಪೂರ್ವಕವಾಗಿ ನನ್ನ ಕಚೇರಿಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅಸಭ್ಯವಾಗಿ ನಡೆದುಕೊಂಡು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೂಡಲೇ ಪೊಲೀಸ್‌ ಠಾಣೆಗೆ ಕರೆ ಮಾಡಿದ್ದು, ನಂತರ ಕಚೇರಿಯಿಂದ ಓಡಿ ಹೋಗಿದ್ದಾರೆ’ ಎಂದು ಅಧಿಕಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಈ ಹಿಂದೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ನಮ್ಮ ಜಮೀನೊಂದರ ವಿಷಯದಲ್ಲಿ ರಾಜೇಶ್‌ ಪರಿಚಯವಾಗಿತ್ತು. ಹೆಣ್ಣು ಮಕ್ಕಳ ಬಗ್ಗೆ ಹೀನ ಮನೋಭಾವ ಹೊಂದಿದ್ದು, ಇವರ ವಿರುದ್ಧ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿವೆ. ರಾಜೇಶ್‌ ಮೊಬೈಲ್‌ನಲ್ಲಿರುವ ಅಶ್ಲೀಲ ಚಿತ್ರಗಳ ಬಗ್ಗೆ ವಿಚಾರಣೆ ನಡೆಸಿ, ಕ್ರಮಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.

ಲೈಂಗಿಕ ಕಿರುಕುಳ (ಐಪಿಸಿ ಸೆಕ್ಷನ್‌ 345 ಎ), ಶಾಂತಿ ಭಂಗ, ಉದ್ದೇಶಪೂರ್ವಕ ಅವಮಾನ (ಐಪಿಸಿ 504), ಮಹಿಳೆಯ ಮಾನಹಾನಿ (ಐಪಿಸಿ 509) ಕಲಂ ಅಡಿ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT