ಭಾನುವಾರ, ಫೆಬ್ರವರಿ 28, 2021
20 °C

ಶಿವಕುಮಾರ ಸ್ವಾಮೀಜಿ  ಭಾವಚಿತ್ರ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಸ್ವಾಮೀಜಿ ಅವರ ಭಾವಚಿತ್ರವನ್ನು ಸಣ್ಣ ರಥದಲ್ಲಿ ಇರಿಸಿ ವಸ್ತುಪ್ರದರ್ಶನ ಸ್ಥಳದವರೆಗೆ ಮೆರವಣಿಗೆ ಮಾಡಲಾಗುತ್ತದೆ.

ವೀರಗಾಸೆ, ನಂದಿಧ್ವಜ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಕಲಾವಿದರು ಮೆರವಣಿಗೆಯನ್ನು ಕಳೆಗಟ್ಟಿಸಿದ್ದಾರೆ. 

ವಸ್ತುಪ್ರದರ್ಶನ ಸ್ಥಳದವರೆಗೆ ಬಂದು ವಾಪಸ್ ಆಗುವ ರಥವನ್ನು ಮಠದ ಆವರಣದಲ್ಲಿ ನಿಲ್ಲಿಸಲಾಗುತ್ತದೆ.

ಕಳೆದ ವರ್ಷದ ಪುಣ್ಯಸ್ಮರಣೆ ವೇಳೆ ಮೆರವಣಿಗೆ ಮುಗಿದ ನಂತರ ಮಠದ ಆವರಣದಲ್ಲಿ ನಿಂತ ರಥವು ಸೆಲ್ಫಿ ಪ್ರಿಯರ ತಾಣವೂ ಆಗಿತ್ತು. ಈ ರಥಕ್ಕೆ ನಮಿಸುತ್ತಿದ್ದ ಬಹುತೇಕ ಭಕ್ತರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು