ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರಗಳ್ಳನ ಕಾಲಿಗೆ ಗುಂಡೇಟು

Published 24 ಜೂನ್ 2024, 11:38 IST
Last Updated 24 ಜೂನ್ 2024, 11:38 IST
ಅಕ್ಷರ ಗಾತ್ರ

ಮಧುಗಿರಿ: ಬಂಧಿಸಿ ಕರೆ ತರುತ್ತಿದ್ದ ಸಮಯದಲ್ಲಿ ಹಲ್ಲೆಗೆ ಮುಂದಾದ ಸರಗಳ್ಳ ರಿಜ್ವಾನ್‌ ಎಂಬುವರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

ಸರಗಳ್ಳತನದ ಆರೋಪಿ ರಿಜ್ವಾನ್‌ರನ್ನು ಸೋಮವಾರ ಪಾವಗಡ ತಾಲ್ಲೂಕಿನ ಹೊಸಕೋಟೆಯಲ್ಲಿ ಬಂಧಿಸಿದ ಪೊಲೀಸರು ಮಧುಗಿರಿಗೆ ಕರೆದುಕೊಂಡು ಬರುತ್ತಿದ್ದರು. ಈ ವೇಳೆ ಕೊಡಿಗೇನಹಳ್ಳಿ ಬಳಿ ಮೂತ್ರ ವಿಸರ್ಜನೆಗೆ ಎಂದು ಪೊಲೀಸ್‌ ವಾಹನದಿಂದ ಕೆಳಗೆ ಇಳಿದ ರಿಜ್ವಾನ್‌ ಸ್ಥಳದಲ್ಲಿದ್ದ ಬಿಯರ್‌ ಬಾಟಲಿಯಿಂದ ಪೊಲೀಸ್‌ ಸಿಬ್ಬಂದಿ ರಮೇಶ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಮಿಡಿಗೇಶಿ ಠಾಣೆಯ ಸಬ್‌ಇನ್‌ಸ್ಪೆಕ್ಟರ್‌ ಹನುಮಂತರಾಯಪ್ಪ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿದ್ದಾರೆ.

ಆರೋಪಿ ರಿಜ್ವಾನ್‌ ಆಂಧ್ರಪ್ರದೇಶದ ಹಿಂದೂಪುರ ನಿವಾಸಿ. ರಿಜ್ವಾನ್‌, ಸಿಬ್ಬಂದಿ ರಮೇಶ್‌ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT